ಮೆಟ್ಟಿನಡ್ಕ : ಕಾಂಕ್ರೀಟೀಕರಣ ಕಾಮಗಾರಿ ಉದ್ಘಾಟನೆ

0

ಗುತ್ತಿಗಾರು – ಕಂದ್ರಪ್ಪಾಡಿ- ಮಡಪ್ಪಾಡಿ ರಸ್ತೆಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ರೂ.30 ಲಕ್ಷ ಮೊತ್ತದಲ್ಲಿ 300 ಮೀ. ಕಾಂಕ್ರೀಟೀಕರಣ ಕಾಮಗಾರಿಯ ಉದ್ಘಾಟನೆ ನಡೆಯಿತು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಲಳಂಬೆಯವರ ಉಪಸ್ಥಿತಿಯಲ್ಲಿ ಹಿರಿಯ ಕಾರ್ಯಕರ್ತರು ಮಡಪ್ಪಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎನ್.ಟಿ.ಹೊನ್ನಪ್ಪ ಉದ್ಘಾಟಿಸಿದರು.

ಮೀನುಗಾರಿಕೆ ನಿಗಮದ ಮಾಜಿ ಅಧ್ಯಕ್ಷ, ಬಾಜಾಪ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎ.ವಿ ತೀರ್ಥರಾಮ, ದ.ಕ ಜಿಲ್ಲಾ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು, ಪ್ರಾ.ಕೃ.ಪ.ಸ.ಸಂಘ ಗುತ್ತಿಗಾರು ಇದರ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೃಷ್ಣಯ್ಯ ಮೂಲೆತೋಟ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿಶಂಕರ ಮುಂಡೋಡಿ , ಪದ್ಮನಾಭ ಮೀನಾಜೆ, ಚಂದ್ರಶೇಖರ ಬಾಳುಗೋಡು, ರಾಜೀವ ವಾಳ್ತಾಜೆ , ಉದಯ ಮುಂಡೋಡಿ , ಉದಯರವಿ ರುದ್ರಾಚಾಮುಂಡಿ, ಶಶಿಧರ ಬಾಳೆಗುಡ್ಡೆ, ರಾಕೇಶ್ ರಾಜ ಹಿರಿಯಡ್ಕ, ಪ್ರೀತಮ್ ಮುಂಡೋಡಿ, ವಿನೋದ್ ಕುಮಾರ್ ಮುಂಡೋಡಿ, ಪದ್ಮನಾಭ ಕಾಜಿಮಡ್ಕ, ನವೀನ್ ವಾಳ್ತಾಜೆ ಹಾಗೂ ನಾಲ್ಕೂರು, ದೇವಚಳ್ಳ, ಮಡಪ್ಪಾಡಿ ಗ್ರಾಮಗಳ ರಸ್ತೆ ಫಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.