ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸೆಂಬರ್ 16 ರಿಂದ ಜನವರಿ 14ರ ತನಕ ಧನು ಪೂಜೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ. 30ರಂದು ದೇವಸ್ಥಾನದ ಅಕ್ಷಯ ಕಲಾಮಂದಿರದಲ್ಲಿ ನಡೆಯಿತು.
ಧನು ಪೂಜೆ ಧನುರ್ಮಾಸದ ಒಂದು ತಿಂಗಳ ಕಾಲ ನಡೆಯಲಿದ್ದು ಪ್ರತಿ ದಿನ ಮುಂಜಾನೆ 5:00 ಗಂಟೆಗೆ ಪೂಜೆ ನಡೆಯಲಿದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ ಬಿ ದಿವಾಕರ ರೈ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್ ಉಳುವಾರು, ಕೇಶವ ಕೊಳಲುಮೂಲೆ, ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು ವೇದಿಕೆಯಲ್ಲಿದ್ದು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,
ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು , ಭಜನಾ ಮಂಡಳಿಯ ಪದಾಧಿಕಾರಿಗಳು, ಊರಭಕ್ತರು , ದೇವಸ್ಥಾನದ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಮೆನೇಜರ್ ಆನಂದ ಕಲ್ಲಗದ್ದೆ ಕಾರ್ಯಕ್ರಮ ನಿರ್ವಹಿಸಿದರು.