ಮಣಿಪಾಲದ ಕವಿಗೋಷ್ಠಿಗೆ ಅಧ್ಯಕ್ಷರಾಗಿ ಸುಳ್ಯದ ಸಾಹಿತಿ ಭೀಮರಾವ್ ವಾಷ್ಠರ್

0

ಉಡುಪಿ ಮಣಿಪಾಲದ ನಚಿಕೇತ ಸಭಾಂಗಣದಲ್ಲಿ ಬತ್ತದ ತೊರೆ ಸ್ನೇಹ ಬಳಗದ ವತಿಯಿಂದ ನಡೆದ ಕವಿ ಸಮ್ಮೇಳನ 2024 ಇದರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸುಳ್ಯದ ಖ್ಯಾತ ಕವಿ ಎಚ್. ಭೀಮರಾವ್ ವಾಷ್ಠರ್ ರವರು ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಕವನ ವಾಚನ ಮಾಡಿದ 30 ಜನ ಕವಿಗಳ ಕವನಗಳನ್ನು ವಿಮರ್ಶೆ ಮಾಡಿ ಅಧ್ಯಕ್ಷ ಭಾಷಣವನ್ನು ಮಾಡಿದರು. ನಂತರ ಬತ್ತದ ತೊರೆ ಸ್ನೇಹ ಬಳಗದವರು ಎಚ್ ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಖ್ಯಾತ ಕವಿಗಳಾದ ಹರಿ ನರಸಿಂಹ ಉಪಾಧ್ಯಾಯ, ಶಂಕರ್ ಕುಲಾಲ್, ಸುಮ ಕಿರಣ್, ತುಳಸಿ ನವೀನ್, ಚಂದ್ರಿಕಾ ಬಾಯಿರಿ ಇನ್ನಿತರರು ಉಪಸ್ಥಿತರಿದ್ದರು.