ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ 18ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ 18ನೇ ವರ್ಷದ ವಾರ್ಷಿಕೋತ್ಸವವು ಡಿ.15ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಡಿ.1ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಮಡಿವಾಳ ಅಡ್ಕಾರು, ಅಧ್ಯಕ್ಷ ಚಂದ್ರಶೇಖರ (ಪುಟ್ಟು) ಅಡ್ಕಾರುಪದವು, ಕಾರ್ಯದರ್ಶಿ ಉದಯ ಪೂಜಾರಿ ಪದವು, ಖಜಾಂಜಿ ಎನ್. ಮನು ಪದವು, ಉಪಾಧ್ಯಕ್ಷರಾದ ಗಂಗಾಧರ ಎ. ಅಡ್ಕಾರು, ಸಂದೀಪ್ ಕಾಮತ್, ಜೊತೆ ಕಾರ್ಯದರ್ಶಿಗಳಾದ ಬಾಬು ಎ.ಆರ್. ಅಡ್ಕಾರು, ತೀರ್ಥೇಶ್ ಪದವು, ಅಡ್ಕಾರು ಶ್ರೀ ತನ್ನಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಅಶೋಕ ಅಡ್ಕಾರು, ದಿನೇಶ್ ಅಡ್ಕಾರು, ರಜತ್ ಅಡ್ಕಾರು, ಸುಖೇಶ್ ಅಡ್ಕಾರುಪದವು, ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು, ಕುಮಾರ ಭಟ್ ಅಡ್ಕಾರು, ದಾಮೋದರ ಅಡ್ಕಾರುಪದವು, ಸೇರಿದಂತೆ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.