ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ಅವರಿಗೆ ಜ್ಞಾನ ಮಂದಾರ ಟ್ರಸ್ಟ್ ನ ಸಮಾಜ ಸೇವಾ ಪ್ರಶಸ್ತಿ ಪ್ರದಾನ

0

ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು, ಶ್ರೀ ಸಾಯಿರಾಮನ್ ನೃತ್ಯ ಕೇಂದ್ರ ತುಮಕೂರು ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೀಡುವ ಸಮಾಜ ಸೇವಾ ಪ್ರಶಸ್ತಿಗೆ ಮಹಿಳಾ ಸಂಘಟಕಿ, ಸಮಾಜ ಸೇವಕಿ ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್ ಅವರು ಭಾಜನರಾಗಿದ್ದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನ.24 ರಂದು ತುಮಕೂರಿನ ಕನ್ನಡ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಮಹಿಳಾ ಮಂಡಲ ಸಹಿತ ಸಂಘಟಕಿಯಾಗಿ ಗುರುತಿಸಿಕೊಂಡಿರುವ ಚಂದ್ರಾವತಿಯವರು ಅನೇಕ ಸಂಘ ಸಂಸ್ಥೆಗಳಲ್ಲಿ‌ ಸೇವೆ ಸಲ್ಲಿಸುತ್ತಿದ್ದಾರೆ.