ಮಂಡೆಕೋಲಿನಲ್ಲಿ ಅರೆಭಾಷೆ ಗಡಿನಾಡ ಉತ್ಸವ

0

ಭಾಷೆ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯಿಂದ ಕಾರ್ಯಕ್ರಮ : ಸದಾನಂದ ಮಾವಜಿ

ಭಾಷೆಯನ್ನು‌ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತಿದ್ದು, ಅಕಾಡೆಮಿ ಆರಂಭಗೊಂಡ ದಶ ವರ್ಷದ ಸವಿನೆನಪಿಗಾಗಿ ಗಡಿಭಾಗಗಳಲ್ಲಿ ಅರೆಭಾಷೆ ಗಡಿನಾಡ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯಲಿ, ಗ್ರಾಮ ಗೌಡ ಸಮಿತಿ ಮಂಡೆಕೋಲು ಇದರ ಆಶ್ರಯದಲ್ಲಿ ಮಂಡೆಕೋಲು ಸಹಕಾರ ಸಂಘದ ಸಭಾಂಗಣದಲ್ಲಿ ಅರೆಭಾಷೆ ಗಡಿನಾಡ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಘಾಟನೆ ನೆರವೇರಿಸಿ‌ ಮಾತನಾಡಿದ ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಜಾಕೆ ಸದಾನಂದರು ದೀಪ ಬೆಳಗಿಸಿ, “ಅರೆಭಾಷೆ ಸುಳ್ಯದ ವ್ಯಾವಹಾರಿಕ ಭಾಷೆಯಾಗಿ ವಿಸ್ತಾರವಾಗಿ ಬೆಳೆದಿದೆ. ಇದು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಅಕಾಡಮಿ ಗಡಿನಾಡ ಉತ್ಸವ ನಡೆಸುವ ಮೂಲಕ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡಿದೆ. ಭಾಷೆಯ ಬೆಳವಣಿಗೆಗೆ ಅಕಾಡೆಮಿಗಳು ಹೊಸ ಹೊಸ ಯೋಜನೆ ಹಮ್ಮಿಕೊಳ್ಳಲಿ.‌ ನಮ್ಮ ಭಾಷೆ ಬೆಳೆಯಲು ನಾವೆಲ್ಲರೂ ಸಹಕಾರ ನೀಡೋಣ” ಎಂದು‌ ಅವರು‌ ಹೇಳಿದರು.

ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂಪಾಡಿ ತೆಂಗಿನ ಹಿಂಗಾರ ಅರಳಿಸಿದರು.

ಮುಖ್ಯ ಅತಿಥಿಗಳಾಗಿ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು, ಮಂಡೆಕೋಲು ಯಾದವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಮಾಸ್ತರ್ ಕೇನಾಜೆ, ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಮಂಡೆಕೋಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ., ಮಂಡೆಕೋಲು ಗ್ರಾಮ ಗೌಡ ಸಮಿತಿಯ ಉಸ್ತುವಾರಿ ನಿರ್ದೇಶಕರಾದ ಎಂ.ಹೆಚ್. ಸುರೇಶ್ ಮುಖ್ಯ ಅತಿಥಿಗಳಾಗಿದ್ದರು

.

ಮಂಡೆಕೋಲು ಗ್ರಾಮ‌ ಗೌಡ ಸಮಿತಿ ಅಧ್ಯಕ್ಷ ಶಿವಪ್ರಸಾದ್ ‌ಉಗ್ರಾಣಿಮನೆ, ಕಾರ್ಯದರ್ಶಿ ದಾಮೋದರ ಮಿತ್ತಪೇರಾಲು, ಮಹಿಳಾ ಘಟಕ‌ ಅಧ್ಯಕ್ಷೆ ದಿವ್ಯಲತಾ ಚೌಟಾಜೆ, ಕಾರ್ಯದರ್ಶಿ ಭಾರತಿ ಉಗ್ರಾಣಿಮನೆ, ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸದಸ್ಯ ಸಂಚಾಲಕರಾದ ಡಾ. ಎನ್.ಎ.‌ಜ್ಞಾನೇಶ್, ತರುಣ ಘಟಕದ ಸಂಚಾಲಕರಾದ ಕುಸುಮಾಧರ ಮಾವಜಿ, ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ತೇಜಕುಮಾರ ಕುಡೆಕಲ್ಲು, ಪಿ.ಎಸ್.ಕಾರ್ಯಪ್ಪ, ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ, ಸೂದನ ಎಸ್ ಈರಪ್ಪ, ಸಂದೀಪ್ ಪೂಳಕಂಡ, ಮೋಹನ್ ಪೊನ್ನಚನ, ಗೋಪಾಲ ಪೆರಾಜೆ, ಕುದುಪನ ಕೆ.ಪ್ರಕಾಶ್ ವೇದಿಕೆಯಲ್ಲಿದ್ದರು.

ಕು.ವಂಶಿ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಜನಾರ್ದನ ಬರೆಮೇಲು ವಂದಿಸಿದರು. ಅಕಾಡೆಮಿ‌ ಸದಸ್ಯೆ ಚಂದ್ರಾವತಿ‌ ಬಡ್ಡಡ್ಕ ಹಾಗೂ ಜಯರಾಜ್ ಕುಕ್ಕೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ ಉದ್ಘಾಟನೆ : ಬೆಳಗ್ಗೆ ಮಂಡೆಕೋಲು ಫಾರೆಸ್ಟ್ ಬಂಗಲೆ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು. ಸಾಮಾಜಿಕ ಧುರೀಣರಾದ ಕುಶಾಲಪ್ಪ ಗೌಡ ಕುಕ್ಕೇಟಿ ಮೆರವಣಿಗೆಗೆ ಚಾಲನೆ ನೀಡಿದರು.‌ ಅಲ್ಲಿಂದ ಹೊರಟ ಮೆರವಣಿಗೆ ಮಂಡೆಕೋಲು ಮೇಲಿನ ಪೇಟೆಗೆ ಹೋಗಿ ಅಲ್ಲಿಂದ ಹಿಂತಿರುಗಿ, ಮಂಡೆಕೋಲು ಸಹಕಾರ ಸಂಘದ ವಠಾರಕ್ಕೆ ತಲುಪಿತು.‌ಅಲ್ಲಿ ಸಭೆ ನಡೆಯಿತು. ಮೆರವಣಿಗೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಪ್ರದರ್ಶನ, ಬಣ್ಣದ ಕೊಡೆ, ಬ್ಯಾಂಡ್, ವಾಲಗ ಸಹಿತ ನೂರಾರು ಮಂದಿ‌ ಭಾಗಹಿಸಿದ್ದರು.