ಕೇರಳದಿಂದ ಗೋಣಿಕೊಪ್ಪ ಕಡೆಗೆ ಹೋಗುತ್ತಿದ್ದ ಕಾರೊಂದು ಕಲ್ಲುಗುಂಡಿ ಬಳಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಕಾರು ಚಲಾಯಿಸುತ್ತಿದ್ದ ಮಹಿಳೆ ಅಪಾಯದಿಂದ ಪಾರಾದ ಘಟನೆ ಇಂದು ನಡೆದಿದೆ.
ಗೋಣಿಕೊಪ್ಪ ಯೂನಿಯನ್ ಬ್ಯಾಂಕ್ ಉದ್ಯೋಗಿಯಾದ ಮಹಿಳೆ ಹುಂಡೈ ಐ 10 ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಳೆ ಬಂದ ಕಾರಣ ರಸ್ತೆಯಿಂದ ಕಾರು ಜಾರಿ ಪಕ್ಕದ ಚರಂಡಿಗೆ ಬಿದ್ದು ಸುಳ್ಯ ಕಡೆಗೆ ಮುಖ ಮಾಡಿ ನಿಂತಿತ್ತು. ಕಾರಿನಲ್ಲಿ ಓರ್ವರೆ ಪ್ರಯಾಣಿಸುತ್ತಿದ್ದು, ಗಾಯಗಳಿಲ್ಲದೆ ಪಾರಾಗಿದ್ದಾರೆ.ಕಲ್ಲುಗುಂಡಿಯ ರಿಕ್ಷಾ ಚಾಲಕರು ವರ್ತಕರು ಸೇರಿ ಪಿಕಪ್ ಮೂಲಕ ಕಾರನ್ನು ಮೇಲಕ್ಕೆ ಎತ್ತಿದರೆಂದು ತಿಳಿದುಬಂದಿದೆ.