ಅನ್ಸಾರಿಯಾ ಎಜುಕೇಶನ್ ಸೆಂಟರ್ ಸಮೀಪದಲ್ಲಿ ಅತ್ಯಾಧುನಿಕ ಶೈಲಿ ಮತ್ತು ಸುಸಜ್ಜಿತ ಅಡಿಟೋರಿಯಂ ಉದ್ಘಾಟನ ಸಮಾರಂಭದ ಇತ್ತೀಚಿಗೆ ನಡೆಯಿತು.
ಉದ್ಘಾಟನೆ ಸಮಾರಂಭದ ಪ್ರಯುಕ್ತ ಸುಳ್ಯದ ಯುವ ಉದ್ಯಮಿ ಪೈಸಲ್ ಕಟ್ಟೆಕ್ಕಾರ್ ನೇತ್ರತ್ವದ ಕೆಎ 21 ವಾಟ್ಸ್ ಅಪ್ ಬಳಗದ ಮೂಲಕ ಉದ್ಘಾಟನೆ ಸಮಾರಂಭಕ್ಕೆ ಸರ್ವರಿಗೂ ವಿವಿಧ ಬಗ್ಗೆಯ ಚಾ ಮತ್ತು ತಿಂಡಿಯನ್ನು ಉಚಿತವಾಗಿ ವಿತರಿಸಲಾಯಿತು.
ಕೆಎ 21 ತಟ್ಟುಕಡ ಎಂಬ ಹೆಸರಿನಲ್ಲಿ ಪ್ರಾಚಿನ ಕಾಲ ಶೈಲಿಯಲ್ಲಿ ತೆಂಗಿನ ಗರಿಯನ್ನು ಬಳಸಿ ಅಂಗಡಿಯನ್ನು ನಿರ್ಮಿಸಲಾಗಿತ್ತು ಅದರೊಳಗೆ ತಳ್ಳುಗಾಡಿಯನ್ನು ಇರಿಸಿ ಅದರಲ್ಲಿ ಚಾ ಮತ್ತು ತಿಂಡಿಗಳನ್ನು ವಿತರಿಸುತಿದ್ದರು.
ತಾತ್ಕಾಲಿಕ ತಟ್ಟು ಕಡೆಯನ್ನು ಸಯ್ಯದ್ ಅಬ್ದುಲ್ ರಹ್ಮಾನ್ ಮಸೂದ್ ಅಲ್ ಬುಖಾರಿ ತಂಙಳ್ ಕೂರತ್ ಉದ್ಘಾಟಿಸಿದರು.
ತಟ್ಟುಕಡಗೆ ಅನೇಕ ಗಣ್ಯರು ಬೇಟಿ ನೀಡಿ ಕೆಎ 21 ವಾಟ್ಸ್ ಆಪ್ ಬಳಗ ಮಾಡುತ್ತಿರುವ ಉಚಿತ ಸೇವೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ತಟ್ಟುಕಡೆಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಚಾ ಮತ್ತು ತಿಂಡಿಯನ್ನು ಸವಿದರು.