ಸುಳ್ಯ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಶೌಚಾಲಯ ಕಟ್ಟಡಕ್ಕೆ ಗುದ್ದಲಿ ಪೂಜೆ

0

ಎಂಆರ್ ಪಿಎಲ್ ಸಂಸ್ಥೆಯವರು ಸುಳ್ಯ ಸ.ಮಾ.ಹಿ. ಪ್ರಾ. ಶಾಲೆಗೆ ಸುಮಾರು 7 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಿದ್ದು ಇದರ ಗುದ್ದಲಿ ಪೂಜೆ ಇಂದು (ಡಿ. 4ರಂದು ) ನಡೆಯಿತು.

ಶಾಸಕಿ ಭಾಗಿರಥಿ ಮುರುಳ್ಯ ನೂತನ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಬಿ ಸದಾಶಿವ, ಸಂಚಾಲಕ ಆರ್.ಕೆ ಭಟ್, ಇಂಜಿನಿಯರ್ ತಕ್ಷತ್, ಕಾರ್ಯದರ್ಶಿ ಗೋಕುಲ್ ದಾಸ್, ಖಜಾಂಜಿ ಡಾ.ಸಾಯಿಗೀತಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿರಾಜ್ ಅಡ್ಕಾರು, ಉಪಾಧ್ಯಕ್ಷೆ ಶ್ರೀಮತಿ ಜಯಶೀಲ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ ಶೆಟ್ಟಿ, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.