ಅರಂತೋಡಿನ ದಿ. ಪಟೇಲ್ ಖದೀಜಮ್ಮ ಮತ್ತು ದಿ. ಅಹಮದ್ ಬ್ಯಾರಿ ಅವರ ಪುತ್ರ ಹಳೆಯ ವ್ಯಾಪಾರಿ ಮತ್ತು ಕೃಷಿಕರಾಗಿದ್ದ ಇಬ್ರಾಹಿಂ ಕುಕ್ಕುಂಬಳ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.5ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಆರು ಮಂದಿ ಪುತ್ರರು ಹಾಗೂ ಐವರು ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.