ಮಡಪಾಡಿ ಗ್ರಾಮದ ಕಾಯರಕಟ್ಟೆ ಜಯರಾಮ ಗೌಡ ಎಂಬವರು ನಿನ್ನೆ ಸಂಜೆ 6 ಗಂಟೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 66 ವರ್ಷವಾಗಿತ್ತು.
ಜಯರಾಮರವರಿಗೆ ಸೊಂಟ ನೋವು ಉಂಟಾದ ಕಾರಣ ಎರಡು ದಿನದ ಹಿಂದೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಹೇಮಾಲತಾ, ಪುತ್ರರಾದ ಸುದರ್ಶನ, ಸುಜಿತ್, ಮಗಳು ಚೈತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.