ಒಂದು ತಿಂಗಳ ಕಾಲ ನಡೆಯಲಿದೆ ಪೂಜೆ
ಡಿ.15 ರಂದು ಧನು ಸಂಕ್ರಮಣ ಒದಗಿ ಬಂದಿದೆ. ಅಂದಿನಿಂದ ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಬೆಳಿಗ್ಗೆ 5.30 ರಿಂದ 6.30 ರ ವರೆಗೆ ಧನು ಪೂಜೆ ಆರಂಭಿಸಿದ್ದೇವೆ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
ಒಂದು ತಿಂಗಳು ನಡೆಯಲಿರುವ ಈ ಪೂಜೆಯಲ್ಲಿ ಭಾಗವಹಿಸಲು ಆಸ್ಪದವಿದೆ.
ಇಲ್ಲಿ ಸರಳವಾದ ಸಾಮುದಾಯಿಕ ಪೂಜೆ ಇದೆ. ಸೂರ್ಯ ಹಾಗೂ ಎಂಟು ಗ್ರಹಗಳಿಗೆ ಪ್ರದಕ್ಷಿಣೆ, ಯೋಗ ವ್ಯಾಯಾಮ ಮತ್ತು ಪ್ರಾಣಾಯಾಮ, ಶ್ಲೋಕಗಳು ಮತ್ತು ಭಜನೆ, ಪೂಜೆ, ಆರತಿ, ಪ್ರಸಾದ ವಿತರಣೆಯಲ್ಲಿ ಸರ್ವರೂ ಭಾಗವಹಿಸುವುದು. ಬಳಿಕ ಯೋಗ ಮತ್ತು ಧ್ಯಾನ ಮುಂದುವರಿಸಲು ಅವಕಾಶವಿದೆ.
ಈ ಮೂರು ದಿನಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅಧ್ಯಯನದ ಸಂಸ್ಕಾರವನ್ನು ಗಳಿಸಿದ್ದಾರೆ. ದೈಹಿಕ ಮಾನಸಿಕ ಪ್ರಯೋಜನಕ್ಕಾಗಿ ಸಮಸ್ತರು ಭಾಗವಹಿಸಿ ಸಂಪನ್ನಗೊಳಿಸಲಾಗುವುದು ದವರು ತಿಳಿಸಿದ್ದಾರೆ.