ಕೆವಿಜಿ ಐಪಿಎಸ್ ನ ವಿದ್ಯಾರ್ಥಿನಿ ಮಿಥಾಲಿ ಯು.ಎಲ್. ಗೆ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿ

0

ಬೆಂಗಳೂರಿನ ಟಿ.ಆರ್.ಎಸ್ ಶಿಕ್ಷಣ ಸಂಸ್ಥೆ ಮತ್ತು ಪುತ್ತೂರಿನ
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ ಕರ್ನಾಟಕ ರಾಜ್ಯಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಮಿಥಾಲಿ ಯು.ಎಲ್ ಭಾಗವಹಿಸಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಬಕಾಸ್ ಸ್ಪರ್ಧೆಯಲ್ಲಿ ಭಾಗವಹಿಸುವವರ ವೇಗ, ನಿಖರತೆ ಮತ್ತು ಮಾನಸಿಕ ಚುರುಕುತನವನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ ಆರು ನಿಮಿಷದ ಪರೀಕ್ಷೆಯನ್ನು ಇದು ಒಳಗೊಂಡಿತ್ತು.
ಇವರು ಸೋಣಗೇರಿ ಗುಂಡ್ಯಡ್ಕದ ಲೋಕೇಶ್ ಉಳುವಾರು ಹಾಗೂ ಶ್ರೀಪ್ರಿಯ ಎ ದಂಪತಿಗಳ ಪುತ್ರಿ. ಇವರಿಗೆ ಪ್ರಫುಲ್ಲ ಗಣೇಶ ಹಾಗೂ ಹರ್ಷಿತ ಮಾರ್ಗದರ್ಶನವನ್ನು ನೀಡಿರುತ್ತಾರೆ. ಇವರಿಗೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ವಿ ಶುಭ ಹಾರೈಸಿದರು. ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ, ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಪ್ರಶಸ್ತಿ ಪತ್ರ ಮತ್ತು ಸ್ಮರಣೀಯನಿತ್ತು ಗೌರವಿಸಿದರು. ಶಾಲಾ ಸಂಯೋಜನಾಧಿಕಾರಿಗಳು ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದರು.