ಕಾಂಗ್ರೆಸ್ ಬೆಂಬಲಿತ ಮೂರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕೊಡಗು ಸಂಪಾಜೆಯ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಡಿ.29ರಂದು ಜರುಗಲಿದ್ದು , ಕಾಂಗ್ರೆಸ್ ಬೆಂಬಲಿತ ಮೂರು ಮಂದಿ ಅಭ್ಯರ್ಥಿಗಳು ಡಿ.18ರಂದು ಚುನಾವಣಾ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸುಧೀರ್ ಹೊದೆಟ್ಟಿ, ರವಿರಾಜ್ ಹೊಸೂರು ಹಾಗೂ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶ್ರೀಮತಿ ಕುಸುಮಾ ಮಾದವ ಕನ್ಯಾನ ಅವರು ನಾಮಪತ್ರ ಸಲ್ಲಿಸಿದರು.