ಬೆಂಗಳೂರಿನ ಗ್ಲೋಬಲ್ ಪ್ರಿನ್ಸಿಪಲ್ಸ್ ಅಸೋಸಿಯೇಷನ್ ಇವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ, ಪ್ರೊ. ಚಂದ್ರಶೇಖರ ದಾಮ್ಲೆಯವರಿಗೆ 2024 ರ Transformative Educator Award ನೀಡಿ ಗೌರವಿಸಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಪರಿಸರದ ಪ್ರಭಾವವನ್ನು ಬಳಸಿ ಮೌಲ್ಯಗಳ ಶಿಕ್ಷಣ ನೀಡುತ್ತಿರುವುದಕ್ಕಾಗಿ ದಾಮ್ಲೆಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬುದಾಗಿ ಪ್ರಾಂಶುಪಾಲರ ಸಂಘವು ತಿಳಿಸಿದೆ.