ಚೆನ್ನಕೇಶವ ದೇವರ ರಥೋತ್ಸವದ ಸ್ವಯಂ ಸೇವಕರಿಗೆ ಪೂರ್ವ ಸಿದ್ಧತೆಯ ಸಭೆ

0

ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ಪೂರ್ವ ಸಿದ್ಧತಾ ಸಭೆಯನ್ನು ನಡೆಸಲಾಯಿತು.

ಡಾ.ಲೀಲಾಧರ್ ಡಿ.ವಿ.ಯವರ ನೇತೃತ್ವದಲ್ಲಿ ಸಂಘಟನೆಯ ಸ್ವಯಂ ಸೇವಕರಿಗೆ ನಾಳೆ ರಾತ್ರಿ ನಡೆಯಲಿರುವ ಬ್ರಹ್ಮ ರಥೋತ್ಸವದ ಶಿಸ್ತು ಪಾಲನೆಯ ಕೆಲವೊಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣ ಕಾಮತ್, ರಜತ್ ಅಡ್ಕಾರ್, ಸತೀಶ್ ಕೆ.ಜಿ ಯವರು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಘಟನೆಯ ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ, ಪ್ರಕಾಶ್ ಯಾದವ್, ಲತೀಶ್ ಗುಂಡ್ಯ,ಉಪೇಂದ್ರ ನಾಯಕ್,ಜಯಂತ್ ಶೇಟ್, ಮೋಹನ ಗುರೂಜಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.