ಸುಳ್ಯ ಸೀಮೆ ದೇವಸ್ಥಾನ ತೊಡಿಕಾನ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರದಲ್ಲಿ ಒಂದು ತಿಂಗಳಿನಿಂದ ಪ್ರಾತಃ ಕಾಲ ನಡೆಯುತ್ತಿರುವ ಧನುಪೂಜೆಯು ಜ.೧೪ರಂದು ಸಂಪನ್ನಗೊಳ್ಳಲಿದ್ದು ಆ ದಿನ ವಿಶೇಷ ಪೂಜೆಗಳು ನಡೆಯಲಿದೆ.
ಬೆಳಗ್ಗೆ ದೇವರ ಗುಂಡಿಯಿಂದ ತೀರ್ಥ ತರಲಾಗುತ್ತದೆ. ಬಳಿಕ ಗಣಹೋಮ, ಬೆಳಗ್ಗೆ ೮.೩೦ರಿಂದ ಶತರುದ್ರಾಭಿಷೇಕ ಮತ್ತು ಸಿಯಾಳಾಭಿಷೇಕ ನಡೆಯುವುದು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯುವುದು. ರಾತ್ರಿ ೭.೩೦ ರಿಂದ ರಂಗಪೂಜೆ ನಡೆಯುವುದು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.