ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರುಗಳ ಸಹಕಾರದೊಂದಿಗೆ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಸಂಸ್ಥೆಯು ನಾಲ್ಕನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದು, ಜ.18ರಂದು ಸಂಸ್ಥೆಯ ಕಚೇರಿಯಲ್ಲಿ ಗಣಪತಿ ಹವನವನ್ನು ನಡೆಸಲಾಯಿತು. ಪುರೋಹಿತರಾದ ನಾಗರಾಜು ಭಟ್ ಗಣಪತಿ ಹವನವನ್ನು ನಡೆಸಿಕೊಟ್ಟರು.
ಸುಳ್ಯ ರೈತ ಉತ್ಪಾದಕ ಸಂಸ್ಥೆಯು ಪ್ರಸ್ತುತ 1,200 ಸದಸ್ಯರನ್ನು ಒಳಗೊಂಡಿದ್ದು, ರೈತರಿಗೆ ಬೇಕಾದ ಎಲ್ಲಾ ರೀತಿಯ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ, ಲಘು ಪೋಷಕಾಂಶಗಳು ಮತ್ತು ಎಲ್ಲಾ ವಿಧದ ಸೋಲಾರ್ ಟರ್ಪಲ್ ಮತ್ತು ಕಪ್ಪುಟರ್ಪಲ್, ವೀಡ್ ಮ್ಯಾಟ್, ಶೇಡ್ ನೆಟ್, ಮತ್ತು ಇತರ ಪ್ಲಾಸ್ಟಿಕ್ ಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿದೆ. ಅಡಿಕೆ ನರ್ಸರಿ ಹೊಂದಿದ್ದು ಉತ್ತಮ ತಳಿಯ ಅಡಿಕೆ ಗಿಡಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸಿ ನೀಡಲಾಗುತ್ತದೆ. ಇದರೊಂದಿಗೆ ಈ ವರ್ಷ ಭಾರತ ಸರಕಾರದ ಕಾಫಿ ಮಂಡಳಿಯ ಅನುಮೋದನೆಯೊಂದಿಗೆ ಕಾಫಿ ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗುವುದು. ಸಂಸ್ಥೆಯಿಂದ ಗದ್ದೆ ಉಳುಮೆಗೆ ಮತ್ತು ತೆಂಗಿನ ಸಿಪ್ಪೆ ಹುಡಿ ಮಾಡಲು ಟ್ರ್ಯಾಕ್ಟರ್ ಹೊಂದಿದ್ದು ರೈತರಿಗೆ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಸುಳ್ಯದ ಎ ಪಿ ಎಂ ಸಿ ಯಲ್ಲಿ ಮುಖ್ಯಕಚೇರಿ ಹೊಂದಿದ್ದು ಬೆಳ್ಳಾರೆ ಯಲ್ಲಿ ಒಂದು ಶಾಖೆಯನ್ನು ಹೊಂದಿದೆ ಮತ್ತು ಶೀಘ್ರದಲ್ಲಿ ಎಲಿಮಲೆಯಲ್ಲಿ ಇನ್ನೊಂದು ಶಾಖೆಯನ್ನು ಆರಂಭಿಸಲಿದೆ.
ಪೂಜಾ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಮತ್ತು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಶ್ರೀಮತಿ ಸುಹಾನ ಪಿ ಕೆ, ಸಂಸ್ಥಯ ಅಧ್ಯಕ್ಷರಾದ ವೀರಪ್ಪಗೌಡ ಕಣಕಲ್ ಮತ್ತು ನಿರ್ದೇಶಕರಾದ ಜಯರಾಮ ಮುಂಡೋಲಿಮೂಲೆ, ಶ್ರೀಶಕುಮಾರ್ ಎಂ ಎಸ್, ಸುರೇಶ್ ರೈ ಅಗಲ್ಪಾಡಿ, ರಾಮಕೃಷ್ಣ ಬೆಳ್ಳಾರೆ, ದೇವರಾಜ್ ಆಳ್ವ, ವಿಜಯ ಕುಮಾರ ಎಂ ಡಿ, ಭಾಸ್ಕರ್ ನಾಯರ್ ಅರಂಬೂರು, ಮಧುರ ಎಂ ಆರ್, ಲೋಹಿತ್ ಕೊಡಿಯಲ, ಮುಖ್ಯಕಾರ್ಯನಿರ್ವಾಹ ಅಧಿಕಾರಿಯಾದ ಹರೀಶ್ ಕೆ ಹಾಗೂ ಸಿಬ್ಬಂದಿ ವರ್ಗ ಮತ್ತು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು.