ಪದೇ ಪದೇ ಅಪಾಯ ಸಂಭವಿಸುವ ಈ ಸ್ಥಳಕ್ಕೆ ತಡೆಬೇಲಿ ಅಗತ್ಯ

ಸುಳ್ಯ- ಸುಬ್ರಹ್ಮಣ್ಯ ರಸ್ತೆಯ ದುಗ್ಗಲಡ್ಕದಿಂದ ಸ್ವಲ್ಪ ಮುಂದೆ ಪಾನತ್ತಿಲ ಜಯರಾಮ ಗೌಡರ ತೋಟದ ಬದಿ ಭಾರೀ ಅಪಾಯದ ಸ್ಥಳವೊಂದಿದೆ. ಪದೇ ಪದೇ ಅಪಾಯ ಸಂಭವಿಸಿದರೂ ಸಂಬಂಧಿಸಿದ ಇಲಾಖೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಜ.14 ರಂದು ಸುಬ್ರಹ್ಮಣ್ಯದಿಂದ ಕಾಸರಗೋಡಿಗೆ ಹೋಗುವ ಯುವಕನೋರ್ವ ವಾಹನವೊಂದಕ್ಕೆ ಸೈಡ್ ಕೊಡುವಾಗ ಈ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಕೂಟರ್ ಕೂಡ ಜಖಂಗೊಂಡಿದೆ. ಸ್ಥಳಿಯರು ಧಾವಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.















ಸುಳ್ಯ- ಸುಬ್ರಹ್ಮಣ್ಯ ರಸ್ತೆಯ ಅಲ್ಲಲ್ಲಿ ಇಂತಹ ಅಪಾಯಕಾರಿ ಜಾಗವಿದ್ದು,ಸೂಕ್ತವಾದ ತಡೆಬೇಲಿ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು.
ದುಗ್ಗಲಡ್ಕ ರಸ್ತೆ ಬದಿಯ ಈ ಗುಂಡಿ ರಸ್ತೆಯಿಂದ ಕೇವಲ ಎರಡು ಫೀಟ್ ಅಂತರದಲ್ಲಿದೆ.ಸೈಡ್ ಕೊಡುವ ಸಂದರ್ಭದಲ್ಲಿ ಸ್ವಲ್ಪ ಆಚೆ ಸರಿದರೂ ಗುಂಡಿಗೆ ಬೀಳುವುದು ಖಚಿತ.ಈ ಚರಂಡಿಗೆ ಹಲವು ಬಾರಿ ವಾಹನಗಳು ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಕಬ್ಬಿಣದ ತಡೆ ಬೇಲಿಯನ್ನು ರಚಿಸಿ ಮುಂದೆ ಬರುವ ಅಪಾಯವನ್ನು ಸಂಬಂಧಪಟ್ಟ ಇಲಾಖೆ ತಪ್ಪಿಸಬಹುದೆಂದು ಸಾರ್ವಜನಿಕರ ವಿನಂತಿಯಾಗಿದೆ.









