ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷ :ಪ್ರಶಾಂತ್ ಪೆರಾಜೆ, ಕಾರ್ಯದರ್ಶಿ:ಯತೀಶ್ ಪಿ., ಖಜಾಂಜಿ: ನಿಶಾಂತ್ ಎ.ವಿ.
ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ವಿಜಯ ಕುಮಾರ್ರ ಅಧ್ಯಕ್ಷತೆಯಲ್ಲಿ ಜ.19 ರಂದು ನಡೆಯಿತು.
ಕಾರ್ಯದರ್ಶಿ ಶ್ರೀನಾಥ್ ಎಂ.ಎಂ. ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಯುವಕ ಮಂಡಲದ ಪ್ರಮುಖ ನಿಯಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ 2025-26ನೇ ಸಾಲಿನ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಪ್ರಶಾಂತ್ ಕೆ.ಎಂ. ಪೆರಾಜೆ, ಉಪಾಧ್ಯಕ್ಷರಾಗಿ ರಾಕೇಶ್ ಕುಂದಲ್ಪಾಡಿ, ಕಾರ್ಯದರ್ಶಿಯಾಗಿ ಯತೀಶ್ ಪಿ.ಪಿ., ಖಜಾಂಜಿಯಾಗಿ ನಿಶಾಂತ್ ಎ.ವಿ., ಕ್ರೀಡಾ ಸಂಚಾಲಕರಾಗಿ ರಂಜಿತ್ ಪಿ.ಬಿ. ಮತ್ತು ಸಾಂಸ್ಕೃತಿಕ ಸಂಚಾಲಕರಾಗಿ ಸುಜಿತ್ ಪಿ.ವಿ. ಆಯ್ಕೆಯಾದರು.
ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್ ಕೆ.ಎಂ ಪ್ರಾರ್ಥಿಸಿದರು. ರಾಕೇಶ್ ಕುಂದಲ್ಪಾಡಿ ಸ್ವಾಗತಿಸಿ, ಸಾಕೇತ್ ಕೆ.ಕೆ. ವಂದಿಸಿದರು.