ವಾಲಿಬಾಲ್ ಪಂದ್ಯಾಟ ಹಂಟರ್ಸ್ ಏನೆಕಲ್ಲು ಪ್ರಥಮ, ಸಾಯಿ ಮುಧುರ ಗುತ್ತಿಗಾರು ದ್ವಿತೀಯ
ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬ ಸಂಭಮ ಪ್ರಯುಕ್ತ ಜ.19 ರಂದು ವಾಲಿಬಾಲ್ ಪಂದ್ಯಾಟ ನಡೆಯಿತು.
ವಾಲಿಬಾಲ್ ಪಂದ್ಯಾಟದಲ್ಲಿ ಹಂಟರ್ಸ್ ಏನೆಕಲ್ಲು ತಂಡ ಪ್ರಥಮ ಸ್ಥಾನ ಪಡೆದರೆ, ಸಾಯಿ ಮುಧುರ ಗುತ್ತಿಗಾರು ತಂಡ ದ್ವಿತೀಯ ಸ್ಥಾನ ಪಡೆಯಿತು. ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ಸುಬ್ರಹ್ಮಣ್ಯ ತೃತೀಯ ಸ್ಥಾನ ಪಡೆದು ಕೋಡಿಯಡ್ಕ ಪ್ರೆಡ್ಸ್ ಐನೆಕಿದು ಚತುರ್ಥ ಸ್ಥಾನ ಪಡೆಯಿತು. ಶಾಸಕಿ ಭಾಗೀರಥಿ ವಿಜೇತರಿಗೆ ಬಹುಮಾನ ವಿತರಿಸಿದರು.
ಪಂದ್ಯಾಟವನ್ನು ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ಉದ್ಘಾಟಿಸಿದರು. ವೇದಿಕೆಯಲ್ಲಿ ನಿಸರ್ಗ ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಜಯಪ್ರಕಾಶ್ ಕೂಜುಗೋಡು,ಗಿರೀಶ್ ಪೈಲಾಜೆ , ಬುಕ್ಷಿತ್ ನಿರ್ಪಾಡಿ, ವಿನಯ್ ಅಂಙಣ ಉಪಸ್ಥಿತರಿದ್ದರು.