ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ, ಗಣೇಶ್ ಭೀಮಗುಳಿ ಉಪಾಧ್ಯಕ್ಷ

0

ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಚುನಾವಣೆ ಜ. 13ರಂದು ನಡೆದಿದ್ದು, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ, ಕಾಂಗ್ರೆಸ್ ಮುಖಂಡ ಮಹೇಶ್ ಕುಮಾರ್ ಕರಿಕ್ಕಳರ ನೇತೃತ್ವದ ನಾಗರಿಕ ಸಮಿತಿ 12 ಸ್ಥಾನಗಳಲ್ಲಿ 8 ಸ್ಥಾನಗಳಲ್ಲಿ ಜಯಗಳಿಸಿತ್ತು.

ಇಂದು (ಜ.22) ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಹಾಲಿ ನಿರ್ದೇಶಕ ಮಹೇಶ್ ಕುಮಾರ್ ಕರಿಕ್ಕಳ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಾಲಿ ನಿರ್ದೇಶಕ ಗಣೇಶ್ ಭೀಮಗುಳಿ ಆಯ್ಕೆಯಾಗಿದ್ದಾರೆ. ಎರಡೂ ಆಯ್ಕೆಗಳು ಅವಿರೋಧವಾಗಿ ನಡೆದಿದೆ.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಶಿವಲಿಂಗಯ್ಯ ಎಂ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ ಮತ್ತು ಸಿಬ್ಬಂದಿಗಳು, ಸಂಘದ ನೂತನ ನಿರ್ದೇಶಕರಾದ ಜಾಕೆ ಮಾಧವ ಗೌಡ, ವೆಂಕಪ್ಪ ಎನ್.ಪಿ. ಬೆಳಗಜೆ, ಸಂತೋಷ್ ಜಾಕೆ, ದಿಲೀಪ್ ಬಾಬ್ಲುಬೆಟ್ಟು, ಧರ್ಮಣ್ಣ ನಾಯ್ಕ ಗರಡಿಬೈಲು, ಗುರುವಪ್ಪ ಕಲ್ಚಾರ್, ಶ್ರೀಮತಿ ಮೂಕಾಂಬಿಕಾ, ಶ್ರೀಮತಿ ಶ್ರೀರಂಜಿನಿ ಪಂಜಬೀಡು, ಧನಂಜಯ ಮಡಪ್ಪಾಡಿ, ಲವಕುಮಾರ್ ಕೋಟೆಗುಡ್ಡೆ ಸೇರಿದಂತೆ ಮಹೇಶ್ ಕುಮಾರ್ ಕರಿಕ್ಕಳರ ಅಭಿಮಾನಿಗಳು, ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.