ಆಲೆಟ್ಟಿ: ಅಯೋಧ್ಯಾ ಮಂದಿರದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಅಂಗವಾಗಿ ದೀಪ ಪ್ರಜ್ವಲನಾ ಕಾರ್ಯಕ್ರಮ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಯೋಧ್ಯಾ ಶ್ರೀ ರಾಮ ಮಂದಿರದಲ್ಲಿ ಪ್ರಭು ಶ್ರೀ ರಾಮ ಲಲ್ಲಾ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೀಪ ಪ್ರಜ್ವಲನಾ ಕಾರ್ಯಕ್ರಮವು ಜ.22 ರಂದು ನಡೆಯಿತು.

ಹಿಂದೂ ಸಂಘಟನೆಯ ಪ್ರಮುಖರಾದ ಶ್ರೀಕಾಂತ್ ಗೊಳ್ವಾಲ್ಕರ್ ರವರು ಶ್ರೀ ರಾಮನ ಕುರಿತು ಉಪನ್ಯಾಸ ನೀಡಿದರು.

ಸ್ಥಳೀಯರಾದ ಸುಧಾಕರ ಆಲೆಟ್ಟಿ, ಸುಧಾಮ ಆಲೆಟ್ಟಿ, ದೇವಿಪ್ರಸಾದ್ ಕಲ್ಲುಗುಂಡಿ, ನಾರಾಯಣ ರೈ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್, ಗೌರವಾಧ್ಯಕ್ಷ ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಸುನಿಲ್ ಗುಂಡ್ಯ ಹಾಗೂ ಪದಾಧಿಕಾರಿಗಳಾದ ವಿನೋದ್ ಕುಡೆಕಲ್ಲು, ರಚನ್ ಆಲೆಟ್ಟಿ, ನಾಗರಾಜ್ ಬಡ್ಡಡ್ಕ, ಯಶೋಧರ ಗುಂಡ್ಯ, ವಿಷ್ಣುಪ್ರಸಾದ್ ಗುಂಡ್ಯ, ಜಯಪ್ರಕಾಶ್ ಗುಂಡ್ಯ, ಲಿಖಿತ್ ಕುಡೆಕಲ್ಲು, ರೂಪಾನಂದ ಗುಂಡ್ಯ, ಪ್ರಮೋದ್,ಧನುಷ್ ಆಲೆಟ್ಟಿ ಮತ್ತಿತರರು ಭಾಗವಹಿಸಿದರು.