ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಸುಳ್ಯದ ಅಮೃತಭವನ ಸಭಾಭವನದಲ್ಲಿ ಜನವರಿ 21ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ 2024ನೇ ಸಾಲಿನ ಅಧ್ಯಕ್ಷರಾದ ಜೇಸಿ ಗುರುಪ್ರಸಾದ್ ನಾಯಕ್ ವಹಿಸಿ, 2024ರ ಕಾರ್ಯ ಚಟುವಟಿಕೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ಭಾರತದ ವಲಯ15ರ ವಲಯ ಅಧ್ಯಕ್ಷರಾದ ಜೇಸಿ ಸನೆಟರ್ ಅಭಿಲಾಷ್ ಬಿ.ಎ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜೇಸಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಇದರ ಅಧ್ಯಕ್ಷ ರಾದ ರೊ| ಯೋಗಿತಾ ಗೋಪಿನಾಥ್ ಭಾಗವಹಿಸಿ ಅಂತರಾಷ್ಟ್ರೀಯ ಸಂಸ್ಥೆಗಳಾದ ಜೇಸಿ, ರೋಟರಿ, ಲಯನ್ಸ್ ಗಳ ಕಾರ್ಯ ಚಟುವಟಿಕೆಗಳನ್ನು ನೆನಪಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜೇಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಸುಹಾಸ್ ಮರಿಕೆ, ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾದ ಲ|ರಾಮಕೃಷ್ಣ ರೈ ಉಪಸ್ಥಿತರಿದ್ದು ಶುಭಹಾರೈಸಿದರು.
2025ನೇ ಸಾಲಿನ ನೂತನ ಅಧ್ಯಕ್ಷರಾದ ಜೇಸಿ. ಸುರೇಶ್ ಕಾಮತ್ ಜಯನಗರ 2025ನೇ ಸಾಲಿನಲ್ಲಿ ಸಂಸ್ಥೆಯ ಅಭಿವೃದ್ಧಿಯೊಂದಿಗೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜೇಸಿ ಸಂಸ್ಥೆಯನ್ನು ಮುನ್ನಡೆಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜೇಸಿ ಹೆಚ್.ಜಿ.ಎಫ್. ಪಿ.ಪಿ.ಪಿ ಅಶೋಕ್ ಚೂಂತಾರು ನಿಕಟ ಪೂರ್ವ ಅಧ್ಯಕ್ಷ ರಾದ ಜೇಸಿ ಹೆಚ್.ಜಿ.ಎಫ್ ನವೀನ್ ಕುಮಾರ್ ಇವರನ್ನು ಪೂರ್ವಾಧ್ಯಕ್ಷರುಗಳ ಸಮ್ಮುಖದಲ್ಲಿ ಪೂರ್ವಾಧ್ಯಕ್ಷರ ಸಾಲಿಗೆ ಸೇರಿಸಿದರು ಹಾಗೂ ವಿನೋದ್ ಮೂಡಗದ್ದೆ ಇವರನ್ನು ನೂತನ ಸದಸ್ಯರಾಗಿ ಜೇಸಿಗೆ ಬರಮಾಡಿಕೊಳ್ಳಲಾಯಿತು.
ಸಭೆಯ ಪೂರ್ವಾರ್ಧ ಭಾಗದಲ್ಲಿ 2024ರ ಜೊತೆ ಕಾರ್ಯದರ್ಶಿ ಯಾದ ಜೇಸಿ. ಸುಭಾಷಿಣಿ ಬೊಳುಗಲ್ಲು, ನಿಕಟಪೂರ್ವ ಅಧ್ಯಕ್ಷ ರಾದ ನವೀನ್ ಕುಮಾರ್, ಸಭೆಯ ಉತ್ತರಾರ್ಧ ಭಾಗದಲ್ಲಿ ಕಾರ್ಯದರ್ಶಿಯಾದ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಅತಿಥಿ ಗಳನ್ನು ವೇದಿಕೆ ಗೆ ಆಹ್ವಾನಿಸಿ, ವಂದಿಸಿದರು.
ಜೇಸಿ. ತನ್ವಿ, ಜೇಸಿ. ಶಶ್ಮಿ ಭಟ್ ಅಜ್ಜಾವರ, ಜೇಸಿ. ರಮ್ಯ ರಂಜಿತ್ ಕುಕ್ಕೆಟ್ಟಿ, ಜೇಸಿ. ಧನುಷ್ ಕುಕ್ಕೆಟ್ಟಿ, ಜೇಸಿ. ಪ್ರಸನ್ನ ಎಂ.ಆರ್., ಜೇಸಿ. ರವಿಕುಮಾರ್ ಅಕ್ಕೋಜಿಪಾಲ್ ಸಹಕರಿಸಿದರು.