ಮೈ ಭಾರತ್ ಮಂಗಳೂರು, ನೆಹರೂ ಯುವ ಕೇಂದ್ರ, ಶ್ರೀದುರ್ಗಾ ಮಹಿಳಾ ಮಂಡಲ ಕೂತ್ಕುಂಜ, ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್ಲ್, ಪಂಚಶ್ರೀ ಪಂಜ ಸ್ಪೋಟ್ಸ್ ಕ್ಲಬ್, ಧರ್ಮಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್ಲ್ ಇವುಗಳ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ ಫೆ. 16 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೆಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
15 ವರ್ಷದಿಂದ 30ದ ಒಳಗಿನವರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಸುಳ್ಯ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶ. ಆಧಾರ್‌ಕಾರ್ಡ್ ಕಡ್ಡಾಯವಾಗಿದ್ದು, ಬೆಳಿಗ್ಗೆ 10 ಗಂಟೆ ಒಳಗೆ ಹೆಸರು ನೋಂದಾಯಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.