ಜಾಲ್ಸೂರು ಗ್ರಾಮದ ಪೈಚಾರಿನಲ್ಲಿ ಸ್ವಾಮಿ ಕೊರಗತನಿಯ ದೈವಾರಾಧನಾ ಸೇವಾ ಸಮಿತಿಯ ನೇತೃತ್ವದಲ್ಲಿ ಕೊರಗತನಿಯ ದೈವಸ್ಥಾನದ ವಠಾರದಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವವು ಮಾ.೧ ಮತ್ತು ೨ರಂದು ನಡೆಯಿತು.
ಮಾ.೧ರಂದು ಬೆಳಗ್ಗೆ ಸ್ಥಳ ಶುದ್ಧಿ, ಗಣಹೋಮ ಕಲಶಾಭಿಷೇಕ ಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾಯಂಕಾಲ ಗುಳಿಗ ದೈವದ ನೇಮ ಆರಂಭಗೊಂಡಿತು. ಬಳಿಕ ಪ್ರಸಾದ ವಿತರಣೆಯಾದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೀಪಾಂಜಲಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ರಾತ್ರಿ ೧೧.೩೦ರಿಂದ ಸ್ವಾಮಿ ಕೊರಗತನಿಯ ದೈವದ ನೇಮ ನಡೆಯಿತು. ಮಾ.೨ರಂದು ಸ್ವಾಮಿ ಕೊರಗತನಿಯ ದೈವದ ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಮಂದಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕಾರ ಮಾಡಿದರು.
ಆಡಳಿತ ಮೊಕ್ತೇಸರರಾದ ನಿಶಾಂತ್ ಕುಮಾರ್ ಪೈಚಾರು, ಆಡಳಿತ ಮಂಡಳಿ ಅಧ್ಯಕ್ಷ ಸಂಜಯ ಕುಮಾರ್ ಪೈಚಾರು, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕುಂಟಿಕಾನ, ಖಜಾಂಜಿ ಲೋಕೇಶ್ ಸೋಣಂಗೇರಿ ಹಾಗೂ ಸದಸ್ಯರು, ನನೇಮೋತ್ಸವ ಸಮಿತಿ ಅಧ್ಯಕ್ಷರಾದ ವರಚಂದ್ರ ಪಿಲಿಕೋಡಿ, ಪ್ರಧಾನ ಕಾರ್ಯದರ್ಶಿ ಅನಿತ ನಾರಾಯಣ, ಖಜಾಂಚಿ ವನಜಗಣೇಶ್ ಅರ್ಭಡ್ಕ ಪದಾಧಿಕಾರಿಗಳು ಆಗಮಿಸಿದವರನ್ನು ಸ್ವಾಗತಿಸಿದರು.
ಕೊರಗತನಿಯ ಗುಡಿಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಹಾಗೂ ಪರಿಸರವನ್ನು ಕೇಸರಿ ಬಂಟಿಂಗ್ಸ್ ಹಾಗೂ ವಿದ್ಯುತ್ ದೀಪಾಲಂಕಾರಗೊಳಿಸಿ ಶೃಂಗಾರ ಮಾಡಲಾಯಿತು.


