ತಮಿಳು ಪುನರ್ವಸತಿದಾರರಲ್ಲೇ ಪ್ರಥಮ
ಅಮರ ಪಡ್ನೂರು ಗ್ರಾಮದ ಕೂಟೇಲು ತಮಿಳು ಕಾಲನಿಯ ಯುವಕನೋರ್ವ ಉನ್ನತ ವ್ಯಾಸಂಗ ಮಾಡಿ ಮರೈನ್ ಇಂಜಿನಿಯರ್ ಆಗಿ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮರೈನ್ ಇಂಜಿನಿಯರ್ ಆಗಿರುವ ಸಂದೀಪ್ ಕೂಟೇಲು ತಮಿಳು ಕಾಲನಿಯ ನಿವಾಸಿ, ಇಲೆಕ್ಟ್ರೀಷಿಯನ್ ಆಗಿರುವ ಕನಕರಾಜ್ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರ. ಮರೈನ್ ಇಂಜಿನಿಯರ್ ಆಗಿ ಮಾ.11ರಂದು ಸಿಂಗಪೂರ್ ದಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ.
ಲಾಜಿಸ್ಟಿಕ್ ಕಂಪೆನಿಯಾದ ವಿಲಿಯಮ್ಸ್ ನ ಒಂದು ಹಡಗಿನಲ್ಲಿ ಜೂನಿಯರ್ ಸೈಲರಾಗಿ (Sailor) ಸಿಂಗಪೂರ್ ನಲ್ಲಿ ಕೆಲಸಕ್ಕೆ ಸೇರಿದ್ದು , ಹಡಗು ಸಿಂಗಪೂರ್ ಮತ್ತು ಅಮೆರಿಕ ಮಧ್ಯೆ ಪ್ರಯಾಣ ಮಾಡಲಿದೆ.
ಸಂದೀಪ್ ರವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಕೊಯಿಕುಳಿಯಲ್ಲಿ, ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಸುಳ್ಯದ ಎನ್ನೆಂಸಿಯಲ್ಲಿ ಪದವಿ ಪೂರ್ವ ಹಾಗೂ ಕುಪ್ಪೆಪದವು ಮರೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಗೋವಾದಲ್ಲಿ ಮರೈನ್ ಇಂಜಿನಿಯರಿಂಗ್ ನಲ್ಲಿ ವಿಶೇಷ ತರಬೇತಿಯನ್ನು ಪಡೆದು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಇವರ ಸಹೋದರಿ ಸಂಧ್ಯಾ ಮಂಗಳೂರು ಕೆನರಾ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.