ನೀಲಮ್ಮ ಕಾನತ್ತಿಲ ನಿಧನ

0

ಸುಳ್ಯದ ಕಾನತ್ತಿಲ ದಿ.ದೇರಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ನೀಲಮ್ಮ ರವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು.
ಕಳೆದ ಮೂರು ತಿಂಗಳಿನಿಂದ ಅವರು ಬೆಂಗಳೂರಿನ ಮಗನ ಮನೆಯಲ್ಲಿದ್ದರು.
ಇಂದು ಬೆಳಿಗ್ಗೆ ಬಾತ್ ರೂಂಗೆ ಹೋಗಿದ್ದಾಗ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದರೆಂದೂ ಕೂಡಲೇ ಅವರನ್ನು ಮಗ ನೀರಜ್ ಮತ್ತು ಸೊಸೆ ಆಸ್ಪತ್ರೆಗೆ ಕರೆದೊಯ್ದರೆಂದೂ ಆ ವೇಳೆಗೆ ಇವರು ಕೊನೆಯುಸಿರೆಳೆದಿದ್ದರೆಂದೂ ತಿಳಿದು ಬಂದಿದೆ.
ಮೃತರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ ಸುಳ್ಯದ ಕಾನತ್ತಿಲ ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲಾಗುವುದೆಂದು ಮನೆಯವರು ತಿಳಿಸಿದ್ದಾರೆ.