
ಕೂತ್ಕುಂಜ ಗ್ರಾಮದ ಕುದ್ವ ಮನೆಯಲ್ಲಿ ಕುದ್ವ ಕುಟುಂಬದ ಉಳ್ಳಾಕುಲು ಮತ್ತು ಪರಿವಾರ ದೈವಗಳು ಹಾಗೂ ಧರ್ಮದೈವಗಳ ನೇಮೋತ್ಸವ
ಮೇ 15 ರಿಂದ ಮೇ.16 ತನಕ ನಡೆಯಿತು.
















ಮೇ.15 ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ ರಾತ್ರಿ ಉಳ್ಳಾಕುಲು, ಪುರುಷ ಭೂತ, ರುದ್ರಚಾಮುಂಡಿ, ವ್ಯಾಘ್ರ ಚಾಮುಂಡಿ ಮತ್ತು ಇತರ ದೈವಗಳ ನೇಮೋತ್ಸವ ನಡೆಯಿತು. ಮೇ.16 ರಂದು ಬೆಳಿಗ್ಗೆ ಚಾಮುಂಡಿ ದೈವದ ನೇಮೋತ್ಸವ, ಧರ್ಮದೈವದ ನೇಮೋತ್ಸವ ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಗುಳಿಗ ದೈವಗಳ ಹಾಗೂ ಅಂಗಾರ ಬಾಕುಡ ದೈವದ
ನೇಮೋತ್ಸವ ನಡೆಯಿತು.










