ಬಾಳಿಲ ಜಯರಾಮರ ಮನೆಯಲ್ಲಿ ಸ್ವಾಮಿ ಕೊರಗಜ್ಜ ನೇಮೋತ್ಸವ ಹಾಗೂ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಮೇ. 16ರಂದು ನಡೆಯಿತು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ
ದೇವಸ್ತಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಧ್ವನಿ ಸುರುಳಿ ಬಿಡುಗಡೆ ಮಾಡಿದರು.
















ಡಾ. ದೇವಿಪ್ರಸಾದ್ ಕಾನತ್ತೂರ್ ಹಾಗೂ ಅವರ ಪತ್ನಿ ಶ್ರೀಮತಿ ಪುಷ್ಪಾ ಡಿ. ಪ್ರಸಾದ್ ಮತ್ತು ಸಾಹಿತ್ಯ ರಚನೆ ಮಾಡಿದ ರಕ್ಷಿತ್ ಮಂಚಿಕಟ್ಟೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೇಮೋತ್ಸವದ ಮನೆಯವರಾದ
ಜಯರಾಮ ಬಾಳಿಲ, ರಕ್ಷಿತ್ ಮಂಚಿಕಟ್ಟೆ, ಸುರೇಶ್ ಉಜಿರಡ್ಕ, ಕುಟ್ಟಿ ಅಜಿಲ ಬಾಳಿಲ, ಚೇತನ್ ಕುಮಾರ್ ಪಂಜ ಸೇರಿದಂತೆ ಜಯರಾಮ ಬಾಳಿಲರ ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಧ್ವನಿ ಸುರುಳಿಯನ್ನು ಜಯರಾಮ ಬಾಳಿಲ ನಿರ್ಮಾಣ ಮಾಡಿದರೆ, ಚರಣ್ ರಾಜ್ ಯೇನೆಕಲ್ಲು ನಿರೂಪಿಸಿದ್ದಾರೆ. ರಕ್ಷಿತ್ ಮಂಚಿಕಟ್ಟೆ ಸಾಹಿತ್ಯ ಬರೆದಿದ್ದಾರೆ. ವಿದ್ಯಾಪುರದ ರಾಜ್ ಮ್ಯೂಸಿಕ್ ನ ಮಿಥುನ್ ರಾಜ್ ಧ್ವನಿ ಮುದ್ರಣ ಮಾಡಿದರೆ, ಪವಿತ್ರಾ ವಿನಯ್ ಮಯ್ಯ ಧ್ವನಿ ನೀಡಿದ್ದಾರೆ.










