ವಿಭಾಶ್ರೀ ಬೆಳ್ಳಾರೆಯವರಿಂದ ಎಡನೀರು ಮಠದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ

0

ಎಡನೀರು ಮಠದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಜು.16ರಂದು ವಿಭಾಶ್ರೀ ಬೆಳ್ಳಾರೆಯವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಅಶೋಕ್ ಕಾಸರಗೋಡು, ಕೀ ಬೋರ್ಡ್ ನಲ್ಲಿ ಅಮ್ಮು ಮಾಸ್ತರ್ ಅಮ್ಮಂಗೋಡು ಸಹಕರಿಸಿದರು. ಬೆಳ್ಳಾರೆಯ ಶ್ರೀ ಲ್ಯಾಬೋರೇಟರಿಯ ಸುರೇಶ್ ಮತ್ತು ಶ್ರೀಮತಿ ಅನುಪಮ ದಂಪತಿಯ ಪುತ್ರಿಯಾಗಿರು ಕು. ವಿಭಾಶ್ರೀಯವರು ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಸಿಎ 4 ನೇ ಸೆಮಿಸ್ಟರ್‌ ನಲ್ಲಿ ವ್ಯಾಸಂಗ ಮಾಡುತ್ತಿದ್ದು ,ಕಳೆದ 4 ವರ್ಷಗಳಿಂದ ಖ್ಯಾತ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಬೆಂಗಳೂರು ಅವರ ಬಳಿ ಸಂಗೀತ ತರಬೇತಿಯನ್ನು ಪಡೆಯುತ್ತಿದ್ದಾರೆ.