ಅರಂಬೂರು ಬಳಿ ಪುಡ್ಝಿ ಕಿಚನ್ ಶುಭಾರಂಭ

0

ಆರಂಭದ ಪ್ರಯುಕ್ತ 7 ವಿಧದ ಕೊಂಬೊ ಅಫರ್

ಅರಂಬೂರು ಎಸ್ ಎ ಎಸ್ ಕಾಂಪ್ಲೆಕ್ಸ್ ಕೆಫೆ ಕಾಫಿ ಡೇ ಬಳಿ ವಿನೂತನ ಶೈಲಿಯ ಉಪಹಾರ ಕೇಂದ್ರ ಪುಢ್ಝಿ ಕಿಚನ್ ಅ.2 ರಂದು ಶುಭಾರಂಭಗೊಂಡಿತು.


ಪುಡ್ಝಿ ಕಿಚನ್ ನನ್ನು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ ಎಂ ಶಹೀದ್ ಮತ್ತು ಸೂಡಾ ಪ್ರಾಧಿಕಾರ ದ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ಉದ್ಘಾಟಿಸಿ ಶುಭ ಹಾರೈಸಿದರು.


ಎಸ್ ಎ ಎಸ್ ಕಾಂಪ್ಲೆಕ್ಸ್ ಪಾಲುದಾರ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ಬಾಷ ಸಾಹೇಬ್ ಎಸ್ ಎ ಎಸ್,ಪಾರೂಕ್ ಎಸ್ ಎ ಎಸ್ ರವರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು.

ಸುಳ್ಯ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್,ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಉದ್ಯಮಿ ಹರಿರಾಯ ಕಾಮತ್,ಜಗದೀಶ್ ಸರಳಿಕುಂಜ,ಅನ್ಸಾರ್ ನಿರ್ದೇಶಕರಾದ ಹಾಜಿ ಅಬ್ದುಲ್‌ ಹಮೀದ್ ಜನತಾ,ಇಬ್ರಾಹಿಂ ಕೆ ಬಿ,ಶಹೀದ್ ಪಾರೆ,ಸುಳ್ಯ ಅಡಿಕೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸಲೀಂ ಪೆರಂಗೊಡಿ,ಅಬೂಭಕ್ಕರ್ ಹಾಜಿ ಅರಂಬೂರು, ಅಬ್ದುಲ್ ರಹಿಮಾನ್ ಮೊಗರ್ಪಣೆ,ಮೂಸಾ ಕಾರ್ಪೇಂಟರ್, ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಪುಡ್ಝಿಯಲ್ಲಿ ಆರಂಭದ ಪ್ರಯುಕ್ತ ಕೇವಲ 479 ರೂಪಾಯಿ ಪುಲ್ ಅಲ್ ಪಹ್ಹಾಮ್, ಐದು ಪೊರೊಟ,ಒಂದು ಪ್ಯಾಕೆಟ್ ಕುಬ್ಬುಸ್,ಎರಡು ಮಿಲ್ಕ್ ಶೇಕ್,ಮೆಯೊನೇಸ್,ಸಲಾಡ್ ಮತ್ತು ಗ್ರೇವಿ ದೊರೆಯುತ್ತದೆ ಇದಲ್ಲದೆ ಬೇರೆ ರೀತಿಯ ಎಂಟು ಕೊಂಬೋ ಅಫರ್ ಗಳು ದೊರೆಯುತ್ತದೆ.
ಅದರ ಜೊತೆಗೆ ಸ್ಥಳೀಯ ಖಾದ್ಯಗಳಾದ ಗಂಜಿ,ಫೀಶ್ ಪ್ರೈ,ಫಿಶ್ ಕರಿ,ಹಾಗೂ ಬಿರಿಯಾನಿ, ಚೈನೀಸ್ ಆಹಾರಗಳು ದೊರೆಯುತ್ತದೆ ಎಂದು ಸಂಸ್ಥೆಯ ಪಾಲುದಾರರಾದ ಫಹೀಮ್ ಎಸ್ ಎ ಎಸ್, ನೌಶದ್, ರಹೀಂ ತಿಳಿಸಿದ್ದಾರೆ