ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಆ. 22 ರಂದು ಶಾಲೆಯ ಸುವಿಚಾರ ಸಾಹಿತ್ಯ ಸಂಘದ ಶೈಕ್ಷಣಿಕ ವರ್ಷದ ನಾಲ್ಕನೇ ಕಾರ್ಯಕ್ರಮ ಕಥಾ ಕಮ್ಮಟ ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆ ಬೆಳಾಲು ಬೆಳ್ತಂಗಡಿ ಇಲ್ಲಿಯ ನಿವೃತ್ತ ಮುಖ್ಯ ಶಿಕ್ಷಕ ಕಥೆ ಕವನ ಬರೆಯುವ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳನ್ನು ಕಥೆ ಬರೆಯಲು ಉತ್ತೇಜಿಸಿದರು. ಶಾಲೆಯಲ್ಲಿ ನಿರಂತರವಾಗಿ ಮೂಡಿಬರುವ ತರಗತಿ ಭಿತ್ತಿಪತ್ರಿಕೆ, ಶಾಲಾ ಭಿತ್ತಿಪತ್ರಿಕೆಗೆ ಈ ಕಾರ್ಯಕ್ರಮ ಪ್ರೇರಣೆಯಾಗಿದೆ.
ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ಸಭಾಧ್ಯಕ್ಷತೆಯನ್ನು ವಹಿಸಿದ್ದರು.









ವಿದ್ಯಾಸಂಸ್ಥೆಗಳ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ಎಸ್ ಸ್ವಾಗತಿಸಿ, ಸುವಿಚಾರ ಸಾಹಿತ್ಯ ಸಂಘದ ಸಂಯೋಜಕರಾದ ಸಹಶಿಕ್ಷಕ ಲೋಕೇಶ್ ಬಿ ವಂದಿಸಿದರು. ಸುವಿಚಾರ ಸಾಹಿತ್ಯ ಸಂಘದ ಸದಸ್ಯ ವಿದ್ಯಾರ್ಥಿನಿಯರಾದ ಆಸಿಯತ್ ಶಮ್ನ ಎಂ ಮತ್ತು ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯ ವಿದ್ಯಾರ್ಥಿನಿಯರು ಆರಂಭ ಗೀತೆ ಹಾಡಿದರು. ಸುವಿಚಾರ ಸಾಹಿತ್ಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.










