ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. ೧೦೦ ಫಲಿತಾಂಶದ ಶೈಕ್ಷಣಿಕ ಸಾಧನೆಗಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.










ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮೂಡುಬಿದರೆ ಕಲ್ಲಬೆಟ್ಟು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚಾರ್ಯರ ಸಂಘ ಹಾಗೂ ವಿಷಯ ಉಪನ್ಯಾಸಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ ಸೆ.೧೩ ರಂದು ನಡೆದ ಶಿಕ್ಷಕರ ದಿನಾಚರಣೆ ೨೦೨೫ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದ್ದು , ಪ್ರಾಂಶುಪಾಲರಾದ ಚೆನ್ನಮ್ಮ.ಪಿ, ಉಪನ್ಯಾಸಕರಾದ ಜಕೀನ ಡಿಸೋಜಾ, ರಂಜಿತ್ ಅಂಬೆಕಲ್ಲು, ದೀಪ್ತಿ.ಐ.ಪಿ,ದೀಕ್ಷಾ.ಯಂ.ಬಿ, ಪ್ರೀತಿ.ಪಿ.ರೈ, ದಿವ್ಯಾ.ಕೆ, ಪ್ರಜ್ಞಾ.ಪಿ.ಆರ್ ಇವರು ಗೌರವ ಸನ್ಮಾನ ಸ್ವೀಕರಿಸಿದರು.










