ಸುಳ್ಯ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್

0

ಒಟ್ಟು 300 ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ

ಸುಳ್ಯ ನ್ಯಾಯಾಲಯದಲ್ಲಿ ಸೆ. ೧೩ ರಂದು ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು ೨೩೮ ಪ್ರಕರಣಗಳಲ್ಲಿ ೧೦೯ ಪ್ರಕರಣಗಳು ರೂ. 19915634 /- ಇತ್ಯರ್ಥಗೊಂಡಿದ್ದು, ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು ೧೧೧ ರಲ್ಲಿ ೯೨ ಪ್ರಕರಣಗಳು ರೂ. ೧೭೪೭೨೧೭೯ /- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು ೧೨೭ ರಲ್ಲಿ ೧೭ ಪ್ರಕರಣಗಳು ರೂ. 2443455 / ರ ಮೂಲಕ ಇತ್ಯರ್ಥಗೊಂಡಿದೆ.

ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 207 ಪ್ರಕರಣಗಳಲ್ಲಿ 191 ಪ್ರಕರಣಗಳು ರೂ. 1003237 /- ಇತ್ಯರ್ಥ ಗೊಂಡಿದ್ದು ಅದರಲ್ಲಿ ಕ್ರಿಮಿನಲ್ ಪ್ರಕರಣಗಳು 195 ರಲ್ಲಿ 179 ಪ್ರಕರಣಗಳು ರೂ. ೯೯೧೨೩೭/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು ೧೪ ರಲ್ಲಿ ೧೨ ಪ್ರಕರಣಗಳು ರೂ. 12000 /- ರ ಮೂಲಕ ಇತ್ಯರ್ಥಗೊಂಡಿದೆ.

ಪ್ರೀ ಲಿಟಿಗೇಷನ್ ಕೇಸಸ್ ನ ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ ಬ್ಯಾಂಕ್ ರಿಕವರಿ 10 ಪ್ರಕರಣಗಳು ರೂ.1336938 /- ಕ್ಕೆ ಇತ್ಯರ್ಥ ಗೊಂಡಿರುತ್ತದೆ.

ಆಸ್ತಿ ತೆರಿಗೆಯು 2523 ಜನರಿಂದ ರೂ. 14513000 /- ಸಂಗ್ರಹವಾಗಿರುತ್ತದೆ.
ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಚಾಲಾನ್ ೨೧೭ ಜನರಿಂದ ರೂ. 112910 /- ಸಂಗ್ರಹವಾಗಿರುತ್ತದೆ.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ ಮೋಹನ್ ಬಾಬು ಹಾಗೂ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾರವರ ನೇತೃತ್ವದಲ್ಲಿ ನಡೆದ ಅದಾಲತ್ ನಲ್ಲಿ ಸಂಧಾನಕಾರರಾಗಿ ವಕೀಲರುಗಳಾದ ಕು. ಲತಾ ಕುಮಾರಿ ಡಿ ಕೆ ಮತ್ತು ವೆಂಕಟ ಕೃಷ್ಣ ಶರ್ಮಾ ಸಹಕರಿಸಿದರು.


ನೂರಾರು ಮಂದಿ ಫಲಾನುಭವಿಗಳು ಭಾಗವಹಿಸಿ ಅದಾಲತ್‌ನ ಪ್ರಯೋಜನ ಪಡೆದುಕೊಂಡರು.
ವಕೀಲರುಗಳು, ನ್ಯಾಯಾಲಯ ಸಿಬ್ಬಂದಿಗಳು, ಆರಕ್ಷಕ ಸಿಬ್ಬಂದಿಗಳು ಸಹಕರಿಸಿದರು.