ಕುಕ್ಕುಜಡ್ಕ ಮಹಾವಿಷ್ಣು ಅಟೋ ಚಾಲಕರ ಸಂಘಕ್ಕೆ ಎಂ. ಜಿ. ಸತ್ಯನಾರಾಯಣ ಮಾಯ್ಪಡ್ಕ ರವರಿಂದ 10 ಸಾವಿರ ದೇಣಿಗೆ

0

ಕುಕ್ಕುಜಡ್ಕ ವಿಷ್ಣುನಗರದ ಶ್ರೀ ಮಹಾವಿಷ್ಣು ದೈವಸ್ಥಾನದ ವತಿಯಿಂದ ಮಹಾವಿಷ್ಣು ಅಟೋ ಚಾಲಕ ಮಾಲಕರ ಸಂಘಕ್ಕೆ ರೂ.10 ಸಾವಿರವನ್ನು ದೇಣಿಗೆಯಾಗಿ ನೀಡಿದರು.

ಮಹಾವಿಷ್ಣು ಅಟೋ ಚಾಲಕ ಸಂಘಕ್ಕೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಟೋ ನಿಲ್ದಾಣದ ಕಾಮಗಾರಿ ಕೆಲಸಕ್ಕೆ ಪೂರಕವಾಗಿ 10 ಸಾವಿರ ಮೊತ್ತವನ್ನುದೈವಸ್ಥಾನದ
ಮೊಕ್ತೇಸರರಾದ ಎಂ. ಜಿ. ಸತ್ಯನಾರಾಯಣ ಮಾಯ್ಪಡ್ಕರವರು
ಸಂಘದ ಅಧ್ಯಕ್ಷ ವಿನಯ್ ಪಾಡಾಜೆ ಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹರ್ಷಕುಮಾರ್ ಮಾಯ್ಪಡ್ಕ, ಶ್ರೀಶ ಕುಮಾರ್ ಮಾಯ್ಪಡ್ಕ ಹಾಗೂ ಅಟೋ ಚಾಲಕ ಮಾಲಕರು ಉಪಸ್ಥಿತರಿದ್ದರು.