ಸ್ಥಳೀಯರಿಂದ ವ್ಯವಸ್ಥೆಯ ಮೇಲೆ ಆಕ್ರೋಶ

ಜಯನಗರ ಮುಖ್ಯ ರಸ್ತೆ ಯುವಕ ಮಂಡಲ, ಅಂಗನವಾಡಿ ಕೇಂದ್ರ, ಮೈತ್ರಿ ಮಹಿಳಾ ಮಂಡಲ, ಮಸೀದಿ ಬಳಿ ಸ್ಥಳೀಯ ವಾಗಿರುವ ಮನೆಗಳಿಂದ ಬರುತ್ತಿರುವ ಕೊಳಚೆ ನೀರು ರಸ್ತೆ ತುಂಬಾ ಹರಿದು ಪರಿಸರ ಅಸ್ವಚ್ಛತೆ ಉಂಟಾಗುತ್ತಿದೆ. ಈ ಸಮಸ್ಯೆ ಕಳೆದ ಅನೇಕ ದಿನಗಳಿಂದ ಇದ್ದು ಸಂಭಂದ ಪಟ್ಟವರು ಈ ಬಗ್ಗೆ ಯಾವುದೇ ಕ್ರಮ ಕೈ ಗೊಳ್ಳುತ್ತಿಲ್ಲ.
ಅಂಗನವಾಡಿ ಕೇಂದ್ರಕ್ಕೆ ಮತ್ತು ಸ್ಥಳೀಯ ಮದ್ರಸಾಕ್ಕೆ ಬರುವ ಸಣ್ಣ ಪುಟ್ಟ ಮಕ್ಕಳು ಈ ಕೊಳಚೆ ನೀರಿನ ಮೇಲೆ ನಡೆದಾಡುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.









ಈ ಭಾಗದ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಗಳಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತಿದ್ದು ಆಕ್ರೋಶ ಗೊಂಡಿರುವ ಸ್ಥಳೀಯರು ಇದೀಗ ಕೊಳಚೆ ನೀರು ಕೂಡ ರಸ್ತೆಯಲ್ಲಿ ಹರಿಯುವ ಕಾರಣ ವ್ಯವಸ್ಥೆಯ ಮೇಲೆ ಹಿಡಿಶಾಪ ಹಾಕುತಿದ್ದಾರೆ.
ಆದ್ದರಿಂದ ಸಂಭಂದಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.










