








ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸಾದಲ್ಲಿ ಶೇಖ್ ಜೀಲಾನಿ ತಂಙಳ್ ರವರ ಅನುಸ್ಮರಣೆ ಕಾರ್ಯಕ್ರಮ ಅ 19 ರಂದು ನಡೆಯಿತು.
ಮದ್ರಸಾ ಸದರ್ ಮುಅಲ್ಲಿಮ್ ಶಫೀಕ್ ನಹೀಮಿ ರವರು ದಿಖ್ರ್ ನೇರ್ಚೆಯ ನೇತೃತ್ವವನ್ನು ವಹಿಸಿದ್ದರು.
ಬಳಿಕ ಸಯ್ಯಿದ್ ಝೖನುಲ್ ಆಬಿದ್ದೀನ್ ತಂಙಳ್ ಜಯನಗರ ರವರು ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶಾಂತಿನಗರ ಮದ್ರಸಾ ಸದರ್ ಮುಅಲ್ಲಿಮ್ ಅಬ್ದುಲ್ ರಶೀದ್ ಝೖನಿ, ಅಶ್ರಫ್ ಅಂಜುಮಿ ಉಸ್ತಾದ್,ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಹನೀಫ್, ಕಾರ್ಯದರ್ಶಿ ಶರೀಫ್, ಉಪಾಧ್ಯಕ್ಷ ನವಾಜ್ ಪಂಡಿತ್, ಸದಸ್ಯರುಗಳು,ಊರಿನ ಮುಸ್ಲಿಂ ಭಾಂದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶೀರಣಿ ವಿತರಣೆ ನಡೆಯಿತು.










