







ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ವತಿಯಿಂದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ 2025 ಕಾರ್ಯಕ್ರಮದ ಅಂಗವಾಗಿ ಎರಡನೆಯ ಸ್ವಚ್ಛತಾ ಕಾರ್ಯಕ್ರಮವನ್ನು ಅ.19 ರಂದು ಚೊಕ್ಕಾಡಿ ಬಸ್ಸುತಂಗದಾಣವನ್ನು ಸ್ವಚ್ಛಗೊಳಿಸಿ , ದುರಸ್ತಿಗೊಳಿಸುವ ಹಾಗೂ ವಠಾರವನ್ನು ಸ್ವಚ್ಚಗೊಳಿಸುವ ಮೂಲಕ ನಡೆಸಲಾಯಿತು. ಯುವತಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯೆಯರು ಭಾಗವಹಿಸಿದ್ದರು.












