ಸುಳ್ಯ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿಯಾಗಿ ನಾಗರಾಜ್ ಅಧಿಕಾರ ಸ್ವೀಕಾರ

0

 

ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಯಾಗಿ ನಾಗರಾಜು ಎಂಬವರು ಅಧಿಕಾರ ವಹಿಸಿಕೊಂಡಿದ್ದಾರೆ.


ಎರಡು ವಾರಗಳ ಹಿಂದೆ ಸುಳ್ಯ ಕೃಷಿ ಇಲಾಖೆಗೆ ಕೃಷಿ ಅಧಿಕಾರಿಯಾಗಿ ಬಂದಿದ್ದ ನಾಗರಾಜರು ಪಂಜ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿದ್ದರು.
ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ನಿವೃತ್ತರಾಗಿದ್ದು ಅವರಿಂದ ತೆರವಾದ ಸ್ಥಾನವನ್ನು ನಾಗರಾಜರಿಗೆ ವಹಿಸಿಕೊಡಲಾಗಿದೆ. ಜೊತೆಗೆ ಸುಳ್ಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿಯೂ ಜವಾಬ್ದಾರಿ ನೀಡಲಾಗಿದೆ. ನಾಗರಾಜರು ಹಾವೇರಿಯವರು.