ಆಲೆಟ್ಟಿ: ಮೊರಂಗಲ್ಲಿನಲ್ಲಿ ಆರೋಗ್ಯ ಸೋಮವಾರ ಮತ್ತು ಚುಕ್ಕಿ- ಚಂದ್ರಮ ಮಾಹಿತಿ ಕಾರ್ಯಾಗಾರ

0

 

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ,ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಐ.ಇ.ಸಿ.ವಿಭಾಗದ ವತಿಯಿಂದ ಆಲೆಟ್ಟಿ ಗ್ರಾಮದ ಮೊರಂಗಲ್ಲು ಪರಿಶಿಷ್ಟ ಜಾತಿ ಕಾಲನಿ ಯ ಸಮುದಾಯ ಭವನದಲ್ಲಿ ಆ.1 ರಂದು “ಆರೋಗ್ಯ ಸೋಮವಾರ ಮತ್ತು ಚುಕ್ಕಿ- ಚಂದ್ರಮ” ಎಂಬ ವಿನೂತನ ಮಾಹಿತಿ ಕಾರ್ಯಾಗಾರವು ನಡೆಯಿತು.
ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರಭೇದಿ ನಿಯಂತ್ರಣ ಪಾಕ್ಷಿಕದ ಕುರಿತು ಮತ್ತು ತಂಬಾಕಿನ ದುಷ್ಪರಿಣಾಮ ಗಳ ಬಗ್ಗೆ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ರವರು ಮಾಹಿತಿ ನೀಡಿದರು.ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಂದರಿ ಮೊರಂಗಲ್ಲು ಕಾರ್ಯಾಗಾರವನ್ನು ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಯಶಸ್ವಿನಿ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಶ್ರೀಮತಿ ಉಷಾಕಿರಣ ಆಲೆಟ್ಟಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಮಮತಾ ಸಹಕರಿಸಿದರು.ಈ ಸಂದರ್ಭದಲ್ಲಿ
ಮಕ್ಕಳಿಗೆ ತಾಯಂದಿರು ಎದೆಹಾಲುಣಿಸುವ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲಾಯಿತು. ಅತಿಸಾರಭೇದಿ ನಿಯಂತ್ರಣ ಹಾಗೂ ತಂಬಾಕು ಸೇವನೆ ಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಮೂಡಿಸಲಾಯಿತು.ಸ್ಥಳೀಯ ‌ಕಾಲನಿಯ ನಿವಾಸಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.