ಕಲ್ಲುಗುಂಡಿ: ಕೂಲಿಶೆಡ್ ಬಳಿ ಅಗ್ನಿ ಅನಾಹುತ ಸಂಭವಿಸಿದ ಮೂರು ಅಂಗಡಿ ಮಾಲಕರಿಗೆ ಜೆ.ಡಿ.ಎಸ್. ಪಕ್ಷದಿಂದ ಪರಿಹಾರದ ಚೆಕ್ ವಿತರಣೆ

0
283

 

p>

ಕಳೆದ ಇಪ್ಪತ್ತು ದಿನಗಳ ಹಿಂದೆ ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನಷ್ಟ ಅನುಭವಿಸಿದ ಮೂರು ಅಂಗಡಿ ಮಾಲಕರಿಗೆ ಜೆ.ಡಿ.ಎಸ್. ಪಕ್ಷದ ವತಿಯಿಂದ ಪರಿಹಾರದ ಚೆಕ್ಕನ್ನು ಆ.2ರಂದು ವಿತರಿಸಲಾಯಿತು.


ಸುಳ್ಯ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಸುಕುಮಾರ ಕೋಡ್ತುಗುಳಿ ಅವರು ಅಂಗಡಿ ಮಾಲಕರುಗಳಾದ ಆನಂದ, ಮಹಮ್ಮದ್ ಕುಂಞಿ, ಲಿಗೋರಿ ಡಿಸೋಜ, ಅವರುಗಳಿಗೆ ತಲಾ ಇಪ್ಪತ್ತೈದು ಸಾವಿರ ರೂ.ಗಳ ಪರಿಹಾರ ಚೆಕ್ಕನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜೆ.ಡಿ.ಎಸ್. ಮುಖಂಡರುಗಳಾದ ರಾಕೇಶ್ ಕುಂಠಿಕಾನ, ಆದಂ ಸಂಟ್ಯಾರ್, ಹಸೈನಾರ್ ಕೂಲಿಶೆಡ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here