ಪೆರಾಜೆಯಲ್ಲೂ ಉಕ್ಕಿ ಹರಿದ ಪಯಸ್ವಿನಿ – ಮನೆಗಳಿಗೆ ನೀರು : 4 ಕುಟುಂಬ ಸ್ಥಳಾಂತರ

0

 

ಪೆರಾಜೆ ದೇವಸ್ಥಾನದ ಬಳಿಯಿಂದಾಗಿ ಹರಿಯುತ್ತಿರುವ ಪಯಸ್ವಿನಿ ನದಿ ನಿನ್ನೆ ರಾತ್ರಿ ಉಕ್ಕಿ ಹರಿದಿದೆ. ಪರಿಣಾಮ ದೇವಸ್ಥಾನದ ಹಿಂಬಾಗದ ಮನೆಗಳಿಗೆ ನೀರು ನುಗ್ಗಿದ್ದು 4 ಮನೆಗಳವರನ್ನು ಪೆರಾಜೆ ಹಾಲ್ ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ರಾತ್ರಿ ಬಾರೀ ಗಾತ್ರದ ಶಬ್ದವೊಂದು ಕೇಳಿದ್ದು ಅದಾದ ಕೆಲವೇ ಸಮಯದಲ್ಲಿ ಪಯಸ್ವಿಯ ನೀರಿನ ಮಟ್ಡ ಏರುತ್ತಲೇ ಬಂತೆಂದೂ, ಕೆಲವು ಕಡೆ ಪಯಸ್ವಿನಿ ಉಕ್ಕಿ ಹರಿಯಿತೆಂದು ತಿಳಿದುಬಂದಿದೆ.

ಸುಳ್ಯ ಅಗ್ನಿಶಾಮಕ ದಳದ ಠಾಣಾಧಿಕಾರಿ ರಾಜಗೋಪಾಲ್ ರವರ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಸಂಜೀವ ಗೌಡ, ವಿ ರಾಜಗೋಪಾಲ, ರಾಜೇಶ್, ಗೃಹರಕ್ಷಕ ದಳದ ದೇವಿ ಪ್ರಸಾದ್, ಹರಿಶ್ಚಂದ್ರ ಮತ್ತು ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.