ಅರಂಬೂರು : ಕಡಿಮೆಯಾಗದ ನೀರಿನ ಪ್ರಮಾಣ

0
1695

 

p>

 

ರಾತ್ರಿ ಹನ್ನೆರಡು ಗಂಟೆಯಿಂದಲೇ ಮಾಣಿ ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ನಿನ್ನೆ ರಾತ್ರಿ 12 ಗಂಟೆ ಇಂದ ಅರಂಬೂರು ಪೆರಾಜೆ ಗೋನಡ್ಕ ಮುಂತಾದ ಸ್ಥಳಗಳಲ್ಲಿ ಪಯಶ್ವಿನಿ ನದಿಯ ನೀರು ರಾಜ್ಯ ಹೆದ್ದಾರಿಗೆ ಬಂದಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಈ ಪ್ರದೇಶಗಳ ಹಲವಾರು ಮನೆಗಳು ಜಲಾವೃತಗೊಂಡಿದ್ದು ಮನೆಯವರ ರಕ್ಷಣಾ ಕಾರ್ಯವನ್ನು ಮಾಡಲಾಗಿದೆ.

ಸ್ಥಳೀಯ ಯುವಕರ ತಂಡ, ಎಸ್ ಕೆ ಎಸ್ ಎಸ್ ಎಫ್ ವಿಕಾಯ ತಂಡ, ಎಸ್ ಎಸ್ ಎಫ್ ತಂಡ, ಸುಳ್ಯ ಅಗ್ನಿಶಾಮಕ ದಳದ ಅಧಿಕಾರಿ ಗಳು, ಸಿಬ್ಬಂದಿಗಳು, ದಳದವರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಈ ಭಾಗದಲ್ಲಿ ಜಲಾವೃತಗೊಂಡು ಸುಮಾರು ಏಳು ಗಂಟೆ ಕಳೆದರೂ ನೀರಿನ ಪ್ರಮಾಣದಲ್ಲಿ ಯಾವುದೇ ಇಳಿಮುಖ ಕಾಣದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟು ನಿಗಾ ವಹಿಸುತ್ತಿದ್ದಾರೆ.

 

 

LEAVE A REPLY

Please enter your comment!
Please enter your name here