ಗುತ್ತಿಗಾರು: ರಣ ಭೀಕರ ಮಳೆ

0

 

ವಳಲಂಬೆ ದೇವಸ್ಥಾನಕ್ಕೆ ನುಗ್ಗಿದ ನೀರು

ಚಿಲ್ತಡ್ಕ, ಮೆಟ್ಟಿನಡ್ಕ ತಗ್ಗು ಪ್ರದೇಶ ಮುಳುಗಡೆ

72 ವರ್ಷಗಳ ಬಳಿಕ ಈ ರೀತಿಯ ಮಳೆ ಬಂದಿದೆ : ಜತ್ತಪ್ಪ ಮಾಸ್ತರ್ ಚಿಲ್ತಡ್ಕ

ಗುತ್ತಿಗಾರು ಆಸುಪಾಸು ರಣ ಭೀಕರ ಮಳೆಯಾಗಿದ್ದು, ತಗ್ಗು ಪ್ರದೇಶ ನೀರಾವರಿಸಿದ ಘಟನೆ ಇಂದು ರಾತ್ರಿ ವರದಿಯಾಗಿದೆ.


ವಳಲಂಬೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಚಿಲ್ತಡ್ಕ ಭಾಗದಲ್ಲಿ ನೀರು ಆವರಿಸಿ ಉಳ್ಳಾಕುಲು ಮಾಡ ಇರುವಲ್ಲಿ ಮತ್ತು ಆಸುಪಾಸು ನೀರು ಆವರಿಸಿದೆ. ಮೆಟ್ಟಿನಡ್ಕ ಭಾಗದಲ್ಲಿ ನದಿ ಹರಿಯುತಿದ್ದು ಆಸುಪಾಸಿನ ಬಹುತೇಕ ಭಾಗಗಳಿಗೆ ನೀರು ಆವರಿಸಿದಾಗಿ ವರದಿಯಾಗಿದೆ.72 ವರ್ಷಗಳ ಬಳಿಕ ಈ ರೀತಿಯ ಮಳೆ ಬಂದಿರುವುದಾಗಿ ಜತ್ತಪ್ಪ ಮಾಸ್ತರ್ ಚಿಲ್ತಡ್ಕ ಮಾಹಿತಿ ನೀಡಿದ್ದಾರೆ.