ಗುತ್ತಿಗಾರು:ಚತ್ರಪ್ಪಾಡಿ ತಡೆಗೋಡೆ ಕುಸಿತ

0
259

ಅಪಾಯದಲ್ಲಿ ವಿದ್ಯುತ್‌ ಲೈನ್

p>

ಸಂಭಾವ್ಯ ಅಪಾಯ ತಪ್ಪಿಸಲು ಮನವಿ


ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಹಾಲೆಮಜಲು ಸಂಪರ್ಕ ರಸ್ತೆಯ ಚತ್ರಪ್ಪಾಡಿ ಚಂದ್ರಶೇಖರ ಆಚಾರ್ಯ ಇವರ ಮನೆಯ ಬಳಿಯಲ್ಲಿ ತಾಲೂಕು ಪಂಚಾಯತ್ ಅನುದಾನದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾಗಿರುವ ತಡೆಗೋಡೆಯು ನಿನ್ನೆ ಸುರಿದ ಧಾರಾಕಾರ ಮಳೆಗೆ ಬುಡ ಸಮೇತ ಬೀಳುವ ಹಂತಕ್ಕೆ ಬಂದ ತಲುಪಿದೆ.

ತಡೆಗೋಡೆಯು ಪಕ್ಕದ ಮರವೊಂದಕ್ಕೆ ಒರಗಿಕೊಂಡಿದ್ದು ಮರ ಮುರಿದು ಬೀಳುವ ಹಂತದಲ್ಲಿದ್ದು, ಮರ ಬಿದ್ದಲ್ಲಿ ವಿದ್ಯುತ್‌ ಲೈನ್ ಮೇಲೆ ಬಿದ್ದು ಕೆಲ ಕರೆಂಟ್ ಕಂಬಗಳು ತುಂಡಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಕೆಲ ಮನೆಗಳಿಗೆ ವಿದ್ಯುತ್‌ ಸಂಪರ್ಕವು ಕಡಿತವಾಗಲಿದೆ.

ಈ ಬಗ್ಗೆ ತಿಂಗಳ ಮುಂದೆಯೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಾಂಟ್ರಕ್ಟ್ ದಾರರಿಗೆ ತಿಳಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಇಲ್ಲಿನವರು ಆರೋಪಿಸಿದ್ದಾರೆ. ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿರುವುದೇ ಈ ಘಟನೆಗಳಿಗೆ ಕಾರಣ ಎನ್ನಲಾಗಿದೆ.

LEAVE A REPLY

Please enter your comment!
Please enter your name here