ನುಸ್ರತ್ ಮ್ಯಾರೇಜ್ ಫಂಡ್ ಸದಸ್ಯರ ಸಮಾಗಮ ಹಾಗೂ ಮ್ಯಾರೇಜ್ ಫಂಡ್ ವಿತರಣೆ

0
56

 

p>

ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ. ಎಲಿಮಲೆ ಇದರ ರೂಬಿ ಜ್ಯುಬಿಲಿ ಪ್ರಯುಕ್ತ ನುಸ್ರತ್ ಮ್ಯಾರೇಜ್ ಫಂಡ್ ನ ಸದಸ್ಯರ ಸಮ್ಮಿಲನ ಹಾಗೂ ಮ್ಯಾರೇಜ್ ಫಂಡ್ ವಿತರಣೆ ಯು ಜರಗಿತು
ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ರವರ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಎಲಿಮಲೆ ಮುದರ್ರಿಸ್ ಜೌಹರ್ ಅಹ್ಸನಿಯವರು ದುವಾ ನೆರವೇರಿಸಿ ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ವಿವಾಹದ ಸಂದರ್ಭದಲ್ಲಿ ಊರಿನ ಯುವಕರನ್ನೂ ಹಿರಿಯರನ್ನೂ ಸೇರಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಂತ್ವನವೆಂಬಂತೆ ವಿವಾಹ ಸಹಾಯಧನ ಸಂಗ್ರಹಿಸಿ ನೀಡುತ್ತಾ ಬರುತ್ತಿರುವ ಮ್ಯಾರೇಜ್ ಫಂಡ್ ನ ಕಾರ್ಯವೈಖರಿಯನ್ನು ಶ್ಲಾಘಿಸಿದರು.


ನುಸ್ರತ್ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಮ್ಯಾರೇಜ್ ಫಂಡ್ ಮೂಲಕ ಕಳೆದ 9 ವರ್ಷಗಳಲ್ಲಿ 18 ಮದುವೆಗಳಿಗೆ ಸಹಾಯ ನೀಡಲಾದ ಬಗ್ಗೆ ಹಾಗೂ ಒಟ್ಟು ಕಾರ್ಯವೈಖರಿಯ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಮ್ಯಾರೇಜ್ ಫಂಡ್‌ ಸದಸ್ಯರಾಗಿ ಮರಣ ಹೊಂದಿದವರಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮ್ಯಾರೇಜ್ ಫಂಡ್‌ ನ ವಿವಾಹ ಸಹಾಯ ನಿಧಿಯನ್ನು ಜಮಾಅತಿಗೊಳಪಟ್ಟ ಬಡ ಹೆಣ್ಣು ಮಗಳ ವಿವಾಹಕ್ಕೆ 3 ಪವನು ಚಿನ್ನಾಭರಣವನ್ನು ನೀಡಲಾಯಿತು.
ಚಿನ್ನಾಭರಣವನ್ನು ಮ್ಯಾರೇಜ್ ಫಂಡ್ ಸಂಚಾಲಕ ಮಹಮೂದ್ ಸಖಾಫಿಯವರು ವಿತರಿಸಿದರು.
ಮ್ಯಾರೇಜ್ ಫಂಡ್ ಕನ್ವೀನರುಗಳಾದ ಹಾರಿಸ್ ಪಳ್ಳಿಕಲ್, ನಾಸಿರ್ ದೊಡ್ಡಂಗಡಿ,
ಅಬ್ದುಲ್ಲ ಜಿ.ಎಸ್, ಆಸಿಫ್ ಹೊಟ್ಟಚೋಡಿ, ಅಬ್ದುಲ್ ಕಾದರ್ ಪಾಣಾಜೆ ಮುಂತಾದವರು ಉಪಸ್ಥಿತರಿದ್ದರು.

ಸಹಕರಿಸಿದ ಸದಸ್ಯರಿಗೆ ಮ್ಯಾರೇಜ್ ಫಂಡ್‌ ಸಂಚಾಲಕ ಮಹಮೂದ್ ಸಖಾಫಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here