ಕನಕಮಜಲು ಪ್ರಾಕೃ.ಪ.ಸ.ಸಂಘಕ್ಕೆ ಶೇಕಡಾ ನೂರು ಸಾಲ ವಸೂಲಾತಿ ಪ್ರಶಸ್ತಿ

0

 

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಂಗಳೂರಿನಲ್ಲಿ ನಡೆದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಶೇಕಡಾ ನೂರು ಸಾಲ ವಸೂಲಾತಿ ಪ್ರಶಸ್ತಿ ಲಭಿಸಿದೆ.
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ನಿರ್ದೇಶಕರುಗಳಾದ ಕರುಣಾಕರ ರೈ ಕುಕ್ಕಂದೂರು, ಗಣೇಶ ಅಂಬಾಡಿಮೂಲೆ, ಸುಖೇಶ್ ಅಡ್ಕಾರುಪದವು, ಶೇಷಪ್ಪ ನಾಯ್ಕ ಕಜೆಗದ್ದೆ, ಮಹೇಶ್ವರ ಕಾರಿಂಜ, ಶ್ರೀಮತಿ ಭಾರತಿ ಸೀತಾರಾಮ ಕಜೆಗದ್ದೆ, ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ ಉಪಸ್ಥಿತರಿದ್ದರು.