ಉಪ್ಪುಕಳದ 12 ಮನೆಗಳಿಗೆ ಸೇತುವೆ ನಿರ್ಮಿಸಿದ ಸೇವಾ ಭಾರತಿ

0
704

ತಡರಾತ್ರಿಯವರೆಗೆ ಕಾರ್ಯ ನಿರ್ವಹಿಸಿ ಸಂಪರ್ಕ ಸಾಧಿಸಿದ ತಂಡ

p>

ಹರಿಹರ ಗ್ರಾ.ಪಂ. ಅಧ್ಯಕ್ಷ ಜಯಂತ ಬಾಳುಗೋಡುರವರ ಕೆಲಸಕ್ಕೆ ಶ್ಲಾಘನೆ

ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಮೂರನೇ ಭಾರಿ ಕಾಲು ಸೇತುವೆ ಸಂಪರ್ಕ ಕಳೆದುಕೊಂಡ 12 ಮನೆಗಳಿಗೆ ಸೇವಾ ಭಾರತಿಯವರು ಆ. 5 ರಂದು ತಡ ರಾತ್ರಿ ವರೆಗೆ ಕೆಲಸ ಮಾಡಿ ಸೇತುವೆ ಸಂಪರ್ಕ ಸಾಧಿಸಿದ್ದಾರೆ.

 

ಬಾಕಿ ಉಳಿದ ಕೆಲಸ ಇಂದು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಈ ಮಧ್ಯೆ ಹರಿಹರ ಪಲ್ಲತಡ್ಕದ ಅಧ್ಯಕ್ಷ ಜಯಂತ ಬಾಳುಗೋಡು ಅವರು ಉಪ್ಪುಕಳ, ಕೊತ್ನಡ್ಕ ಭಾಗಕ್ಕೆ ಫುಡ್ ಕಿಟ್ ತಲುಪಿಸುವುದು, ಸೇವಾ ಭಾರತಿಯವರ ಸೇವೆಗೆ ಸಾಥ್ ನೀಡುವುದು ಹೀಗೆ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

 

LEAVE A REPLY

Please enter your comment!
Please enter your name here