ಶ್ರೀ ರಾಮಕೃಷ್ಣ ಕ್ರೆಡಿಟ್‌ಕೋ-ಓಪರೇಟಿವ್ ಸೊಸೈಟಿಗೆ ಸಾಧನಾ ಪ್ರಶಸ್ತಿ 2021 -22 

0

 

ಮಂಗಳೂರಿನ ಶ್ರೀ ರಾಮಕೃಷ್ಣಕ್ರೆಡಿಟ್‌ಕೋ-ಓಪರೇಟಿವ್ ಸೊಸೈಟಿಗೆ 2021- 22ನೇ ಸಾಲಿನಲ್ಲಿ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ ಸಾಧನಾ ಪ್ರಶಸ್ತಿ ೨೦೨೧-೨೨ ಲಭಿಸಿದೆ.   ೦೫  ರಂದು ಜರುಗಿದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ  ಮಹಾಸಭೆಯಲ್ಲಿ, ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರವರು ಸಾಧನಾ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ   ಕೆ. ಜೈರಾಜ್ ಬಿ. ರೈಯವರಿಗೆ ಹಾಗೂ ಪ್ರಭಾರ ಮಹಾಪ್ರಬಂಧಕ  ಗಣೇಶ್ ಜಿ.ಕೆ.ಯವರಿಗೆ ಪ್ರದಾನ ಮಾಡಿದರು.


ಸಂಘದ ನಿರ್ದೇಶಕರುಗಳಾದ  ಕುಂಬ್ರದಯಾಕರ ಆಳ್ವ ಮತ್ತು  ಬೆಳ್ಳಿಪಾಡಿ ಪ್ರಸಾದ್‌ ಕೌಶಲ್ ಶೆಟ್ಟಿ ಹಾಗೂ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ  ಪ್ರವೀಣ್ ಬಿ. ನಾಯಕ್ ಮತ್ತು ಎಸ್.ಸಿ.ಡಿ.ಸಿ.ಸಿ.ಬ್ಯಾಂಕಿನ ಉಪಾಧ್ಯಕ್ಷರಾದ  ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ   ಬಿ. ನಿರಂಜನ್,  ಭಾಸ್ಕರ್‌ಎಸ್. ಕೋಟ್ಯಾನ್,  ಟಿ. ಜಿ. ರಾಜಾರಾಮ ಭಟ್,   ಎಂ. ವಾದಿರಾಜ್ ಶೆಟ್ಟಿ,  ಎಸ್. ರಾಜು ಪೂಜಾರಿ,  ಶಶಿಕುಮಾರ್ ರೈ ಬಿ.,  ಎಸ್.ಬಿ. ಜಯರಾಮ್ ರೈ, ಡಾ| ಐ. ದೇವಿಪ್ರಸಾದ್ ಶೆಟ್ಟಿ ಬೆಳಪು,   ಕೆ. ಹರೀಶ್ಚಂದ್ರ,  ಎಂ. ಮಹೇಶ್ ಹೆಗ್ಡೆ,  ಬಿ. ಅಶೋಕ್‌ಕುಮಾರ್ ಶೆಟ್ಟಿ,  ಮೋನಪ್ಪ ಶೆಟ್ಟಿಎಕ್ಕಾರು,  ಸದಾಶಿವ ಉಳ್ಳಾಲ್,   ರಾಜೇಶ್‌ರಾವ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ   ರವೀಂದ್ರ ಬಿ.,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ   ಜಯಕರ ಶೆಟ್ಟಿ ಇಂದ್ರಾಳಿಯವರು ಉಪಸ್ಥಿತರಿದ್ದರು.

ಈ ಪ್ರಶಸ್ತಿಯು ಸಂಘಕ್ಕೆ ೧೧ನೇ ಬಾರಿ, ಹಾಗೂ೬ವರ್ಷಗಳಿಂದ ನಿರಂತರವಾಗಿ ಲಭಿಸಿದೆ.